ಉಗುರು ಕತ್ತರಿಸುವುದು ಹಾಗೂ ಉಗುರಿಗೆ ಬಣ್ಣ ಹಾಕುವುದರ ವಿರುದ್ಧ ಫತ್ವಾ…!

ದಾರೂಲ್‌:
 
       ಮುಸ್ಲಿಂ ಮಹಿಳೆಯರಿಗೆ ಈಗ ಇರುವ ನಿರ್ಬಂಧಗಳ ಸಾಲಿಗೆ ಹೊಸ ಸೇರ್ಪಡೆ ಮಾಡಿರುವ ಉಲೂಮ್‌ ದೇವಬಂದ್‌ ಇಸ್ಲಾಮಿಕ್‌  ಸಂಸ್ಥೆ ಮುಸ್ಲಿಂ ಮಹಿಳೆಯರು ಹೇಗಿರಬೇಕೆಂಬುದರ ಬಗ್ಗೆ ಹೊಸ ಫತ್ವಾ ಹೊರಡಿಸಿದ್ದು, ಉಗುರು ಕತ್ತರಿಸುವುದು ಹಾಗೂ ಉಗುರಿಗೆ ಬಣ್ಣ ಹಾಕುವುದರ ವಿರುದ್ಧ ನಿರ್ಬಂಧ ಹೇರಿದೆ. 
      ಉಗುರು ಕತ್ತರಿಸುವುದು ಹಾಗೂ ಉಗುರಿಗೆ ಬಣ್ಣ ಹಾಕುವುದನ್ನು ಇಸ್ಲಾಮ್ ಗೆ ವಿರುದ್ಧ ಎಂದು ಹೇಳಿರುವ ದಾರೂಲ್ ಉಲೂಮ್, ಮಹಿಳೆಯರು ನೇಲ್ ಪಾಲಿಶ್ ಹಾಕುವುದರ ಬದಲು ಮೆಹೆಂದಿ ಹಾಕಬಹುದು ಎಂದು ದಾರೂಲ್ ಉಲೂಮ್ ಸಂಸ್ಥೆಯ ಸದಸ್ಯ ಮುಫ್ತಿ ಇಶ್ರಾರ್ ಗೌರ ತಿಳಿಸಿದ್ದಾರೆ. 
   
      ಫತ್ವಾಗಳನ್ನು ಹೊರಡಿಸುವುದಕ್ಕಾಗಿಯೇ ಪ್ರಸಿದ್ಧಿ ಪಡೆದಿರುವ ಸಂಘಟನೆ, ಕಳೆದ ವರ್ಷ ಮುಸ್ಲಿಂ ಮಹಿಳೆಯರು ಹುಬ್ಬುಗಳನ್ನು ಟ್ರಿಮ್ ಮಾಡಿ ತಿದ್ದುವಂತಿಲ್ಲ ಕೂದಲು ಕತ್ತರಿಸುವಂತಿಲ್ಲ ಎಂದು ಫತ್ವಾ ಹೊರಡಿಸಿತ್ತು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap