ಚೆನ್ನೈ ಉದ್ಯಮಿಗಳಿಗೆ ಬೆಳಂಬೆಳಿಗ್ಗೆ ಶಾಕ್ ನೀಡಿದ ಐಟಿ…!!!!

ಚೆನ್ನೈ:
         ಚೆನ್ನೈನ ಪ್ರಖ್ಯಾತ ಸಂಸ್ಥೆಗಳಾದ  ಲೋಟಸ್ ಗ್ರೂಪ್ ಮತ್ತು ಸರವಣ ಸಂಸ್ಥೆಗಳ ವಿವಿಧ ಕಚೇರಿಗಳ ಮೇಲೆ ಬೆಳಂಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
       ಲೋಟಸ್ ಗ್ರೂಪ್ , ಸರವಣ ಸ್ಟೋರ್ಸ್ ನ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು. ಚೆನ್ನೈ 72 ಕಡೆ ಮತ್ತು ಕೊಯಮತ್ತೂರಿನ 2 ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈನ ಆಳ್ವಾರ್ ಪೇಟೆಯಲ್ಲಿರುವ ಟಿಟಿಕೆ ರೋಡ್ ನಲ್ಲಿನ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
      ಸರವಣ ಸ್ಟೋರ್ಸ್ ಮಾಲೀಕತ್ವದ ಶಾಪಿಂಗ್ ಮಾಲ್ ಮತ್ತು ಸರವಣ ಭವನ್ ಹೊಟೆಲ್ ಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ