ಬೀದರ್ :
ಗೂಡ್ಸ್ ಕ್ಯಾರಿಯರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9 ರ ಮಿನಕೇರಾ ಕ್ರಾಸ್ ಬಳಿ ನಡೆದಿದೆ .
ಮೃತರನ್ನು ಅನ್ಸರ್ ಬಸಂತಪೂರ್ (32), ವಿಜಯ ಕುಮಾರ್ ಬಸಂತಪೂರ್ (24), ಇಸ್ಮಾಯಿಲ್ (25) ಎಂದು ಗುರುತಿಸಲಾಗಿದೆ.
ಮೃತರು ಗೂಡ್ಸ್ ಕ್ಯಾರಿಯರ್ ನಲ್ಲಿ ಈರುಳ್ಳಿ ತುಂಬಿಕೊಂಡು ಹೈದರಾಬಾದ್ ಗೆ ಹೊರಟಿದ್ದರು. ಈ ವೇಳೆ ವಾಹನದ ಟೈರ್ ಪಂಕ್ಚರ್ ಆಗಿದ್ದರಿಂದ ಮಿನಕೇರಾ ಪ್ಲೈಓವರ್ ಮೇಲೆ ಮತ್ತೊಂದು ಟೈರ್ ಜೋಡಣೆ ಮಾಡುತ್ತಿದ್ದರು. ಈ ವೇಳೆ ಲಾರಿ ಹರಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಬೀದರ್ ಗ್ರಾಮೀಣಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನಿಗಾಗಿ ಹುಡುಕಾಟ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ