ಮಧುಗಿರಿ : ಜನರ ಸಮಸ್ಯೆಗಳಿಗೆ ‍ಸ್ಥಳದಲ್ಲಿಯೇ ಪರಿಹಾರ ನೀಡಲು ಮುಂದಾದ ಸಚಿವರು…!

ಮಧುಗಿರಿ :

   ಜನರ ಸಮಸ್ಯೆ ಗಳನ್ನು ಅರಿತು ಸ್ಥಳದಲ್ಲಿಯೇ ಪರಿಹರಿಸಲು ಮೊಟ್ಟ ಮೊದಲ ಬಾರಿಗೆ ಮಧುಗಿರಿ ಪಟ್ಟಣದಲ್ಲಿ ಸಹಕಾರಿ ಸಚಿವರಾದ ಕೆ ಎನ್ ರಾಜಣ್ಣ ಮತ್ತು ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ ರವರು ಚಾಲನೆ ನೀಡಿದರು.ಪಟ್ಟಣದಲ್ಲಿನ 1 ರಿಂದ 8 ನೇ ವಾರ್ಡಿನ ಜನರ ಮನೆ ಮನೆಗಳಿಗೆ ತೆರಳಿ ಸಮಸ್ಯೆ ಗಳನ್ನು ಆಲಿಸಿದರು.

   ಪಟ್ಟಣದ ಪ್ರಮುಖ ವಾರ್ಡ್ ಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜನರ ಸಮಸ್ಯೆ ಗಳಾದ ನೀರು ಸರಬರಾಜು , ವಿದ್ಯುತ್ , ಚರಂಡಿ ಸ್ವಚ್ಚತೆ , ಪಿಂಚಣಿ ಹಾಗೂ ಯು ಜಿ ಡಿ ಕಾಮಗಾರಿ ಗಳಿಂದಾಗಿ ಉಂಟಾಗಿರುವ ಗುಂಡಿಗಳನ್ನು ಮುಚ್ಚುವಂತೆ ಹಾಗೂ ನೀರಿನ ಸಂಪರ್ಕ ಕಲ್ಪಿಸಿ ಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

   ಐದನೇ ವಾರ್ಡಿನಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ ಮೆನೂ ಚಾರ್ಟ್ ನಲ್ಲಿರುವಂತೆ ಆಹಾರ ನೀಡುವಂತೆ , ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸುವಂತೆ ಮತ್ತು ಉಪವಿಭಾಗಾಧಿಕಾರಿ ಗಳ ಮಟ್ಟದ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುದೆಂದು ತಿಳಿಸಿದರು.

  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಬಂದ ನಂತರ ಪ್ರಥಮ ಬಾರಿಗೆ ಸಹಕಾರಿ ಸಚಿವರ ಈ ಪ್ರಯತ್ನಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Recent Articles

spot_img

Related Stories

Share via
Copy link