ಹರಪನಹಳ್ಳಿ:
ಬೇಸಿಗೆಯ ಬರಗಾಲಕ್ಕೆ ನೀರು, ಆಹಾರ ಅರಸಿ ಬಂದ ಮಂಗಗಳು ಹಾಗೂ ಮುಶ್ಯಾಗಳ ಹಾವಳಿಯಿಂದ ಪಟ್ಟಣದ ವಿವಿಧ ಬಡಾವಣೆಯ ನಿವಾಸಿಗಳು ರೋಸಿಹೋಗಿದ್ದಾರೆ.
ಪಟ್ಟಣದ ಕೊಟ್ಟೂರು ರಸ್ತೆಯ ಬ್ರೂಸ್ಪೇಟೆ, ನಟರಾಜ ಕಲಾಭವನ, ವಾಲ್ಮೀಕಿ ನಗರ ಸೇರಿದಂತೆ ವಿವಿಧ ವಾರ್ಡಗಳಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ಇದರಿಂದ ಮಹಿಳೆಯರು, ಮಕ್ಕಳು, ವೃದ್ದರು ಅವುಗಳಿಗೆ ಹೆದರಿಕೊಂಡು ರಸ್ತೆಯಲ್ಲಿ ಓಡಾಡಲು ಹಿಂದೆಟು ಹಾಕುವಂತಾಗಿದೆ.
ಇನ್ನೂ ಮನೆಯ ಮಹಡಿಯ ಮೇಲೆ ಯಾವುದೇ ರೀತಿಯ ಆಹಾರ ಪದಾರ್ಥ, ದವಸ ದಾನ್ಯ ಮತ್ತು ಬಟ್ಟೆಗಳನ್ನು ಹಾಕುವಂತಿಲ್ಲ. ಇವುಗಳನ್ನು ಸಂಪೂರ್ಣ ಹಾಳು ಮಾಡುತ್ತಿವೆ ಎಂದು ದೂರುತ್ತಾರೆ ಸ್ಥಳೀಯ ಬ್ರೂಸ್ಪೇಟೆ ನಿವಾಸಿ ಕೆ.ಸಿದ್ದೇಶ್ ಅವರು.
ಸಂಬಂಧಿಸಿದವರಿಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಮಂಗಗಳು ಹಾಗೂ ಮುಶ್ಯಾಗಳ ಹಾವಳಿ ತಡೆಗಟ್ಟಲು ಪಟ್ಟಣದ ಪುರಸಭೆಯ ಅಧಿಕಾರಿಗಳು ಅಥವಾ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಇವುಗಳ ಹಾವಳಿಯಿಂದ ಮುಕ್ತಗೊಳಿಸಿ ಸಾರ್ವಜನಿಕರಿಗೆ ನೆಮ್ಮದಿ ನೀಡಲಿ ಎನ್ನುತ್ತಾರೆ ಸ್ಥಳೀಯರಾದ ಈರಮ್ಮ, ಪ್ರಕಾಶ್, ಮಂಜುಳಾ, ಕೊಟ್ರಪ್ಪ, ಮಂಜುನಾಥ, ಮಲ್ಲೇಶ್ ಅವರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ