ಹುಳಿಯಾರು ಠಾಣೆಯಲ್ಲಿ ಪೊಲೀಸರಿಗೆ ಹಬೆ ವ್ಯವಸ್ಥೆ

 ಹುಳಿಯಾರು : 

      ಠಾಣೆಯಲ್ಲಿ ಹಬೆ ವ್ಯವಸ್ಥೆ ಅಳವಡಿಕೆ ಮಾಡುವ ಮೂಲಕ ಕೊರೋನಾ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರ ಆರೋಗ್ಯ ಕಾಪಾಡಲು ಮೇಲಧಿಕಾರಿಗಳ ಸೂಚನೆ ಮೇರೆಗೆ ಹುಳಿಯಾರು ಪಿ.ಎಸ್.ಐ. ಕೆ.ಟಿ.ರಮೇಶ್ ಮುಂದಾಗಿದ್ದಾರೆ.

      ನೀರಿನ ಜತೆ ತುಳಸಿ ಎಲೆ, ಪುದೀನಾ, ಬೇವಿನ ಎಲೆ, ನೀಲಗಿರಿ ಎಲೆ, ಅಮೃತಬಳ್ಳಿ ಎಲೆಗಳನ್ನು ಕುಕ್ಕರ್‍ನಲ್ಲಿ ಹಾಕಿ ಅದರಿಂದ ಬರುವ ಸ್ಟೀಮ್ ಅನ್ನು ಪ್ರತಿನಿತ್ಯ ಎರಡು ಬಾರಿ ತೆಗೆದುಕೊಂಡಾಗ ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಬಹುದು ಎನ್ನುವುದು ಇರದ ಹಿಂದಿರುವ ಉದ್ದೇಶವಾಗಿದೆ.

      ಹಾಗಾಗಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಗ್ಯಾಸ್‍ಸ್ಟೌ ಮೂಲಕ ಕುಕ್ಕರ್‍ನಲ್ಲಿ ನೀರನ್ನು ಕಾಯಿಸಿ, ಅದರಿಂದ ಹೊರಹೊಮ್ಮುವ ಆವಿಯನ್ನು ಪೈಪ್‍ಗಳ ಮೂಲಕ ಹರಿಸಲಾಗುತ್ತಿದೆ. ಈ ಹಬೆ ತೆಗೆದುಕೊಂಡಲ್ಲಿ ಬಾಯಿ–ಮೂಗು ಸ್ವಚ್ಛ ಆಗಲಿದ್ದು, ವೈರಾಣು ಬಾಧೆಯನ್ನು ಕೊಂಚಮಟ್ಟಿಗೆ ನಿಯಂತ್ರಿಸಬಹುದು ಎನ್ನುತ್ತಾರೆ ಪಿ.ಎಸ್.ಐ. ರಮೇಶ್.

      ಠಾಣೆಗೆ ಬರುವ ಹಾಗೂ ಠಾಣೆಯಿಂದ ಹೊರಹೋಗುವ ಸಿಬ್ಬಂದಿ ಈ ಹಬೆ ವ್ಯವಸ್ಥೆಯನ್ನು ಬಳಸಬಹುದಾಗಿದೆ. ಜೊತೆಗೆ ಠಾಣೆಗೆ ಬರುವ ಸಾರ್ವಜನಿಕರೂ ಇದರ ಬಳಕೆ ಮಾಡಬಹುದಾಗಿದೆ ಪ್ರಸ್ತುತ ಸಿಬ್ಬಂದಿಗಳು ನಿತ್ಯ ಉತ್ಸಾಹದಿಂದ ಹಬೆ ಪಡೆಯುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link