ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ…!

ಬೆಂಗಳೂರು:

      ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಂದಣಿ ವಿನಾಯಿತಿ ಜೊತೆಗೆ ವ್ಯಾಪಾರಿಗಳು ಸುಳ್ಳು ಮಾಹಿತಿ ನೀಡಿದರೆ ಸರ್ಕಾರದ ಬದಲು ಅವರೇ ಹೊಣೆಗಾರರಾಗುವ ಸಂಬಂಧ ಕರ್ನಾಟಕ ಸರಕು ಸೇವೆಗಳ ತೆರಿಗೆ(ತಿದ್ದುಪಡಿ) ವಿಧೇಯಕಕ್ಕೆ ಸದನದಲ್ಲಿ ಧ್ವನಿ ಮತದ ಮೂಲಕ ಅಂಗೀಕಾರ ದೊರೆತಿದೆ.

     ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಮಸೂದೆಗೆ ಅಂಗೀಕಾರ ಕೋರಿದ್ದು, ಸದಸ್ಯರು ಅನೇಕ ಅಭಿಪ್ರಾಯ ಮತ್ತು ಸಲಹೆ ನೀಡಿದ ನಂತರ ಅಂಗೀಕಾರಗೊಂಡಿದೆ.

     ಆರು ವರ್ತಕ ಸ್ನೇಹ ಉಪಕ್ರಮಗಳು ಮತ್ತು 16 ಸುಗಮ ತೆರಿಗೆ ಅನುಸರಣ ಹಾಗೂ ಆಡಳಿತಾತ್ಮಕ ಉಪಕ್ರಮಗಳಿಗೆ ಸಂಬಂಧಿಸಿದಂತೆ ವಿಧೇಯಕದಲ್ಲಿ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಸಣ್ಣ ವ್ಯಾಪಾರಿಗಳಿಗೆ ಜಿಎಸ್​ಟಿ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ನಂತರ ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ದ್ವಿಗುಣಗೊಂಡಿದೆ. 2017 -2018ರಲ್ಲಿ 44,000 ಕೋಟಿ ರೂಪಾಯಿ ಇದ್ದ ಜಿ.ಎಸ್.ಟಿ. ಸಂಗ್ರಹ 2022 -23 ರಲ್ಲಿ 81,848 ಕೋಟಿ ರೂ.ಗೆ ಹೆಚ್ಚಳವಾಗಿದೆ.

     ಸರಕು ಸಾಗಣೆ ವ್ಯವಹಾರದಲ್ಲಿ 40 ಲಕ್ಷ ರೂ. ವರೆಗೆ ನೋಂದಣಿ ರಹಿತ ವ್ಯವಹಾರ ನಡೆಸಬಹುದು. ಸೇವೆಗಳ ವ್ಯವಹಾರದಲ್ಲಿ 20 ಲಕ್ಷ ರೂಪಾಯಿವರೆಗೆ ನೋಂದಣಿ ರಹಿತ ವ್ಯವಹಾರ ನಡೆಸಬಹುದಾಗಿದೆ. ವ್ಯಾಟ್ಸಾಪ್ ಗೆ ವೇಳೆ ರಾಜ್ಯದಲ್ಲಿ 5.8 ಲಕ್ಷ ವರ್ತಕರು ವ್ಯಾಟ್ ಪಾವತಿ ಸುತ್ತಿದ್ದರು. ಜಿ.ಎಸ್.ಟಿ. ಅವಧಿಯಲ್ಲಿ 10 ಲಕ್ಷ ವರ್ತಕರು ತೆರಿಗೆ ಪಾವತಿಸುತ್ತಿದ್ದಾರೆ ಎಂದು ಸಚಿವ ಹೆಚ್.ಕೆ. ಪಾಟೀಲ್ ವಿಧೇಯಕದ ಬಗ್ಗೆ ವಿವಿಧ ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap