ಬೆಂಗಳೂರು :
ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟು, ಹಾಸನ, ಮಂಗಳೂರು ಮಾರ್ಗವಾಗಿ ಗೋವಾ ತಲುಪಲಿರುವ ನೂತನ ಹೊಸ ರೈಲು ಸಂಚಾರ ಆರಂಭಗೊಳ್ಳಲಿದ್ದು, ಬುಧವಾರ ರೈಲ್ವೆ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ.
ವೇಳಾಪಟ್ಟಿ ಸಹಿತ ವಿವರವನ್ನು ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 10.30ಕ್ಕೆ ಗೋವಾದ ವಾಸ್ಕೋಡಗಾಮ ರೈಲು ನಿಲ್ದಾಣ ತಲುಪಲಿದೆ. ಹಾಸನಕ್ಕೆ ರಾತ್ರಿ 9.50, ಮಂಗಳೂರಿಗೆ ಬೆಳಗಿನ ಜಾವ 3.30, ಉಡುಪಿಗೆ 4.49, ಮುರುಡೇಶ್ವರಕ್ಕೆ 6.12 ಹಾಗೂ ಕಾರವಾರಕ್ಕೆ 8.25ಕ್ಕೆ ತಲುಪಲಿದೆ.
Decades old battle for a dedicated train to Coastal Karnataka frm Bangalore bearing fruit today!
Thank you MoSR Sri @SureshAngadi_ Ji, GM & COM @SWRRLY, for the new daily YPR-VSG train Via Padeelbypass reducing the travel time.
Kudos to Kundapur Railway Samiti for the efforts! pic.twitter.com/a7GoTLONEb
— Shobha Karandlaje (@ShobhaBJP) February 11, 2020
ಸಂಸದರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೇಳಾಪಟ್ಟಿಯೇ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ’ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ಯಾವ ವೇಳೆಯಲ್ಲಿ ರೈಲು ಸಂಚರಿಸಲು ಅವಕಾಶ ಇದೆ, ಪ್ರಯಾಣಿಕರಿಗೆ ಎಷ್ಟು ಅನುಕೂಲ ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಮೂಲಕ ಯಶವಂತಪುರ-ಗೋವಾ, ಗೋವಾ-ಯಶವಂತಪುರ ರೈಲು ಸೇವೆ ಪ್ರತಿದಿನವೂ ರೈಲ್ವೆ ಪ್ರಯಾಣಿಕರಿಗೆ ದೊರೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ