ವಾಷಿಂಗ್ಟನ್:
ಸ್ನೇಹಿತನನ್ನು ರಕ್ಷಿಸಲು ಹೋಗಿ ಜಲಪಾತದಲ್ಲಿ ರಾಯಚೂರು ಮೂಲದ ಯುವಕ ಮೃತಪಟ್ಟ ಘಟನೆ ಬುಧವಾರ ಅಮೆರಿಕದ ಟರ್ನರ್ ಫಾಲ್ಸ್ ನಲ್ಲಿ ನಡೆದಿದೆ.
ಅಮೆರಿಕದ ಟೆಕ್ಸಾಸ್ ಯುನಿರ್ವಸಿಟಿ ಆಫ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಓದುತ್ತಿದ್ದ ಜಿಲ್ಲೆಯ ಸಿಂಧನೂರು ನಗರದ ಶ್ರೀಪುರಂ ಜಂಕ್ಷನ್ ನಿವಾಸಿ ಅಜೇಯ ಕುಮಾರ್ ಮೋಡಿ (23) ಮೃತ ಯುವಕ.
ನಿನ್ನೆ(ಬುಧವಾರ) ಅಜಯ್ ತನ್ನ ಸ್ನೇಹಿತರ ಜೊತೆ ಟರ್ನರ್ ಫಾಲ್ಸ್‌ಗೆ ತೆರಳಿದ್ದನು. ಜಲಪಾತಕ್ಕೆ ತೆರಳಿದಾಗ ತನ್ನ ಸ್ನೇಹಿತ ಆಂಧ್ರ ಪ್ರದೇಶದ ನಲ್ಲೂರಿನ ಕೌಶಿಕ್ ಜಾರಿ ಬಿದ್ದಿದ್ದು, ಆತನನ್ನು ರಕ್ಷಿಸಲು ಅಜಯ್ ಜಲಪಾತಕ್ಕೆ ಧುಮುಕಿದ್ದನು. ಈ ವೇಳೆ ಇಬ್ಬರೂ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸತತ ಒಂದು ಗಂಟೆಗಳ ಕಾಲ ಶೋಧ ನಡೆಸಿದ ಬಳಿಕ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತದೇಹವು ಸ್ವಗ್ರಾಮ ಸಿಂಧನೂರಿಗೆ ಶುಕ್ರವಾರ ಸಂಜೆ ಬರಬಹುದು ಎಂದು ಕುಟುಂಬದ ಸಂಬಂಧಿಗಳು ತಿಳಿಸಿದ್ದಾರೆ.
ಅಜಯ್ ಓರ್ವ ರೈತನ ಪುತ್ರನಾಗಿದ್ದು, ಅಜಯ್ ಅಕಾಲಿಕ ಮರಣದಿಂದಾಗಿ ಕುಟುಂಬದ ಸದಸ್ಯರೆಲ್ಲರೂ ಶೋಕದಲ್ಲಿ ಮುಳುಗುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ