ಬೆಳಗಾವಿ :
ಸೇತುವೆ ಮೇಲಿಂದ ಕಾರ್ಮಿಕರನ್ನು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಸೇತುವೆ ಮೇಲಿಂದ ಪಲ್ಟಿಯಾಗಿ ಬಿದ್ದ ಪರಿಣಾಮ ಸುಮಾರು 7 ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಬೋಗೂರ ಗ್ರಾಮದ ಬಳಿ ನಡೆದಿದೆ.
ಬೋಗೂರ ಗ್ರಾಮದ ಶೇಖಪ್ಪ ಕೇದಾರಿ, ಸಾವಿತ್ರಿ ಬಾಬು ಹುಣಸಿಕಟ್ಟಿ, ತಂಗೆವ್ವ ಯಲ್ಲಪ್ಪ ಹುಣಸೀಕಟ್ಟಿ, ಅಶೋಕ ಫಕೀರ ಕೇದಾರಿ, ಶಾಂತಮ್ಮ ಯಲ್ಲಪ್ಪ ಜುಂಜರಿ, ಶಾಂತವ್ವ ಹನುಮಂತ ಅಳಗುಂಡಿ, ನಾಗವ್ವ ಯಶವಂತ ಮಾಠೋಳ್ಳಿ ಮೃತಪಟ್ಟವರು.
ಖಾನಾಪುರ ತಾಲೂಕಿನ ಬೋಗೂರ ಗ್ರಾಮದಿಂದ ಕಾರ್ಮಿಕರು ಕೂಲಿ ಕೆಲಸಕ್ಕೆ ಇಟಗಿಗೆ ಹೊರಟಿದ್ದರು. ವೇಗವಾಗಿ ಹೊರಟಿದ್ದ ಟ್ರ್ಯಾಕ್ಟರ್ ಸುಮಾರು 50 ಅಡಿ ಎತ್ತರದ ಸೇತುವೆ ಮೇಲಿಂದ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ದುರ್ಘಟನೆಯಲ್ಲಿ 30 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅದರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಖಾನಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
