ತಿಪಟೂರು :
ಸರ್ಕಾರ ಕೋಟ್ಯಾಂತರ ರೂಗಳನ್ನು ಖರ್ಚುಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ನೀಡುತ್ತಿದೆ, ಆದರೆ ನಗರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಾವಿರಾರು ಲೀಟರ್ ನೀರು ಚಂರಂಡಿ ಪಾಲಾಗುತ್ತಿದೆ.
ನಗರದ ಡಿ.ಸಿ.ಸಿ.ಬ್ಯಾಂಕ್ ಮುಂಭಾಗದ ಪಾದಚಾರಿ ಮಾರ್ಗದಲ್ಲಿರುವ ನೀರಿನ ಪೈಪ್ ಲೈನ್ ಒಡೆದು ಕಳೆದೊಂದು ವಾರದಿಂದ ನೀರು ಪೋಲಾಗುವುದನ್ನು ಕಂಡ ಸಾರ್ವಜನಿಕರು ನಗರಸಭೆಗೆ ದೂರನ್ನು ಸಲ್ಲಿಸಿದರು. ನಗರಸಭೆಯ ಅಧಿಕಾರಿಗಳು ದುರಸ್ಥಿ ಮಾಡಿ ಪೋಲಾಗುತ್ತಿರುವ ನೀರನ್ನು ತಡೆದಿಲ್ಲ ಎಂದು ನಾಗರೀಕರು ದೂರಿದ್ದಾರೆ.
ಎಲ್ಲಡೇ ನೀರಿಗೆ ಹಾಹಾಕಾರವಿದ್ದು, ಸರ್ಕಾರವೇ ನೀರನ್ನು ಮಿತವಾಗಿ ಬಳಸಿ ಎಂದು ಹೇಳುತ್ತಿರುವ ಸಂದರ್ಭದಲ್ಲಿ ನಗರದ ಬಸ್‍ನಿಲ್ದಾಣದ ಹತ್ತಿರ, ಹಾಗೆಯೇ ಹಳೇಪಾಳ್ಯರಸ್ತೆಯಲ್ಲಿ ಸುಮಾರು ವರ್ಷಗಳಿಂದಲೂ ರಸ್ತೆಯ ಮಧ್ಯ ದಲ್ಲೇ ಪೈಪ್ ಒಡೆದು ನೀರು ಹಾಳಾಗುತ್ತಿದ್ದರೂ ಕ್ರಮ ತೆಗೆದುಕೊಂಡಿಲ್ಲ. ದೂರನ್ನು ನೀಡಿದ ತಕ್ಷಣ ಸಂಬಂಧಿಸಿದವರಿಗೆ ಸರಿಪಡಿಸಲಾಗುತ್ತದೆ ಮತ್ತು ನಿಮ್ಮ ದೂರನ್ನು ದಾಖಲಿಸಲಾಗಿದೆ ಎಂಬ ಸಂದೇಶವನ್ನು ಬಿಟ್ಟರೆ ಯಾವ ಕೆಲಸವೂ ಆಗುವುದಿಲ್ಲ ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
