ಟೋಕಿಯೊ :
ಟೋಕಿಯೊ ಪ್ಯಾರಾಲಿಂಪಿಕ್ಸ್ (Tokyo Paralympics 2021)ರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಸುಮಿತ್ ಆಂಟಿಲ್ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
#TokyoParalympics, Men's Javelin Throw: Sumit Antil wins gold (Sport Class F64) with World Record throw of 68.55m pic.twitter.com/fQqBgevgHZ
— ANI (@ANI) August 30, 2021
ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಸುಮಿತ್ ಅಂಟಿಲ್ ಒಂದಲ್ಲ, ಎರಡಲ್ಲ, ಮೂರು ಬಾರಿ ವಿಶ್ವ ದಾಖಲೆಯನ್ನು ಮುರಿದರು. ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುವ ಮೊದಲ ಪ್ರಯತ್ನದಲ್ಲಿ ಅವರು 66.95 ದೂರಕ್ಕೆ ಡಿಸ್ಕಸ್ ಎಸೆದರು. ನಂತರ ಅವರ ಐದನೇ ಪ್ರಯತ್ನದಲ್ಲಿ, ಅವರು 68.55 ಮೀಟರ್ ಎಸೆತದೊಂದಿಗೆ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಭಾರತದ ಸಹ ಆಟಗಾರ ಸಂದೀಪ್ ಚೌಧರಿ 62.20 ಮೀ. ಅತ್ಯುತ್ತಮ ಎಸೆತದೊಂದಿಗೆ ನಾಲ್ಕನೇ ಸ್ಥಾನ ಪಡೆದರು.
ಸುಮಿತ್ ಸಾಧನೆಯೊಂದಿಗೆ ಭಾರತವು ಸೋಮವಾರ ಎರಡನೇ ಚಿನ್ನದ ಪದಕ ಗೆದ್ದುಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
