ದಾವಣಗೆರೆ:
ಗಳಿಸುವ ಸಂಪತ್ತನ್ನು ಹಂಚಿಕೊಳ್ಳುವುದೇ ಶ್ರೇಷ್ಠ ಧರ್ಮವಾಗಿದ್ದು, ಅದು ಸತ್ಪಾತ್ರರಿಗೆ ವಿನಿಯೋಗವಾದಾಗ ಮಾತ್ರ ಸಂಪತ್ತು ಹಂಚಿದಕ್ಕೂ ಸಾರ್ಥಕವಾಗಲಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಮೋತಿ ಗೌರಮ್ಮ ಪಿ.ರಾಮರಾವ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ಸಾಮಾಜಿಕ ಸಂವೇದನೆವುಳ್ಳ ವ್ಯಕ್ತಿಗಳು ಸಮಾಜದ ಆಸ್ತಿಯಾಗಿ ಬೆಳೆಯುತ್ತಾರೆ. ಸಂಸ್ಕಾರಕ್ಕಿರುವ ಮೌಲ್ಯ ಸಮಾಜದಲ್ಲಿ ಮಯಾವುದಕ್ಕೂ ಇಲ್ಲ. ಮಕ್ಕಳಿಗೆ ಸಂಸ್ಕಾರ ಕೊಟ್ಟರೆ, ಅವರು ಆದರ್ಶ ಪ್ರಜೆಗಳಾಗುತ್ತಾರೆ. ನೋವುಗಳ ಅನುಭವದೊಂದಿಗೆ ಬದುಕು ರೂಪಿಸಿಕೊಂಡವರು ಸಾಧನೆ ಮಾಡುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಪತ್ರಕರ್ತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಎಚ್.ಬಿ.ಮಂಜುನಾಥ್, ಸಮಾಜದಿಂದ ಪಡೆದದನ್ನು ಸಮಾಜಕ್ಕೆ ಕೊಡುವಂತಾಗಬೇಕು. ಸಮಾಜದಲ್ಲಿ ಪಡೆಯುವವರಿಗಿಂತ ಕೊಡುವವರೇ ಹೆಚ್ಚಾಗಬೇಕು. ಇದೇ ಸಮೃದ್ಧಿಯ ಲಕ್ಷಣವಾಗಿದೆ. ಇದರ ಸಾಕಾರಕ್ಕೂ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ಆಸಕ್ತಿ ಇದ್ದರೂ ಸಹ ಆರ್ಥಿಕ ಸಂಕಷ್ಟದಿಂದಾಗಿ, ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ದಿ.ಮೋತಿರಾಮರಾಯರ ವಿದ್ಯಾರ್ಥಿ ದೆಸೆಯಿಂದಲೂ ಅವರಿಗೆ ಆರ್ಥಿಕ ಸಂಕಷ್ಟದಿಂದಾಗಿ ಹೆಚ್ಚು ಓದಲಾಗದಿದ್ದರೂ ಪರಿಶ್ರಮದಿಂದ ಉದ್ಯಮಿಗಳಾಗಿ ಬೆಳೆದು, ಸಹಾಸ್ರಾರು ಜನರಿಗೆ ಉದ್ಯೋಗದಾತರಾದರು.
ಅರ್ಹ ವಿದ್ಯಾರ್ಥಿಗಳಿಗೆ ಅನೇಕ ವರ್ಷಗಳಿಂದ ಸಹಾಯ ಧನ ನೀಡುತ್ತಾ ಬಂದ ರಾಮರಾಯರ ಕೈಂಕರ್ಯವನ್ನು ಮುಂದುವರೆಸಿಕೊಂಡು ಬಂದಿರುವ ಅವರ ಮಕ್ಕಳು ಈ ವರ್ಷವೂ ಸುಮಾರು 600 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ.ಗಳಂತೆ, ಸಮಾರು 6 ಲಕ್ಷ ರೂ.ಗಳನ್ನು ನಗದಾಗಿ ನೀಡುತ್ತಿರುವುದು ಇತರರಿಗೆ ಮಾದರಿಯಾಬೇಕು ಎಂದರು.
ಈ ಹಣ ಪಡೆದ ವಿದ್ಯಾರ್ಥಿಗಳು ಈ ಹಣವನ್ನು ಶೈಕ್ಷಣಿಕ ಉದ್ದೇಶಕ್ಕಾಗಿಯೇ ಬಳಸಬೇಕೆಂದು ಕಿವಿಮಾತು ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ಕುರ್ಕಿ ಮಾತನಾಡಿ, ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಣವೇ ಸಾಧನವಾಗಿದೆ. ಶಿಕ್ಷಣಕ್ಕಾಗಿ ನೀಡುವ ದಾನ, ಪ್ರೋತ್ಸಾಹಗಳು ಅತ್ಯಂತ ಶ್ರೇಷ್ಠ ಎಂದರು.
ಗಾಂಗಾವತಿ ಸಿಲ್ಕ್‍ನ ಡಾ.ಚನ್ನಬಸಪ್ಪ ಪಾವಟೆ, ಮೋತಿ ಸೈಕಲ್ ಮಾಲೀಕ ಶಂಕರಪ್ಪ ಮಾತನಾಡಿದರು. ಕ್ಷೀರಸಾಗರ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಐ್ರಸ್ಟ್‍ನ ಪ್ರಮುಖರಾದ ಮೋತಿ ಪಿ. ಪರಮೇಶ್ವರರಾವ್, ಮೋತಿ ಪಿ. ಸುಬ್ರಹ್ಮಣ್ಯರಾವ್, ಮೋರ್ತಿ ಪಿ. ಗುರುಪ್ರಸಾದ್, ಎನ್.ಪ್ರಕಾಶ್‍ರಾವ್, ರಾಘವೇಂದ್ರರಾವ್, ರವಿಚಂದ್ರ ಭಟ್, ಬಾಲಕೃಷ್ಣ ಭಟ್, ಭವಾನಿ ಗುರುಪ್ರಸಾದ್, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
