ಬೆಂಗಳೂರು:
ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ಹೆಸರು ಮುಂಚೂಣಿಯಲ್ಲಿದ್ದು, ಬಹುತೇಕ ನೇಮಕವಾಗುವ ಸಾಧ್ಯತೆ ಇದೆ. ಪ್ರಸ್ತುತ ಅಧಿಕಾರದಲ್ಲಿರುವ ರವಿ ಕುಮಾರ್ ಈ ತಿಂಗಳ ಅಂತ್ಯದಲ್ಲಿ ನಿವೃತ್ತಿಯಾಗಲಿದ್ದಾರೆ.
ಮುಖ್ಯ ಕಾರ್ಯದರ್ಶಿ ಹುದ್ದೆಗೆ 9 ಮಂದಿ ಐಎಎಸ್ ಅಧಿಕಾರಿಗಳು ರೇಸ್ನಲ್ಲಿ ಇದ್ದಾರೆ. ಈ ಪೈಕಿ ವಂದಿತಾ ಶರ್ಮಾ ಅವರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ದಟ್ಟವಾಗಿದೆ.
ವಂದಿತಾ ಶರ್ಮಾ ಜೊತೆಗೆ ಅವರ ಪತಿ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಹಾಗೂ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಹೆಸರು ಕೂಡ ಲಿಸ್ಟ್‌ನಲ್ಲಿದೆ. ಇದರೊಂದಿಗೆ ಪಟ್ಟಿಯಲ್ಲಿ ಶಾಲಿನಿ ರಜನೀಶ್, ಅಜಯ್ ಸೇತ್, ಇ.ವಿ.ರಮಣ ರೆಡ್ಡಿ, ರಾಕೇಶ್ ಸಿಂಗ್, ಜಿ.ಕುಮಾರ್ ನಾಯ್ಕ್ ಮತ್ತು ಗೌರವ ಗುಪ್ತ ಹೆಸರುಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ