ಸರ್ವತೋಮುಖ ವಿಕಸನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯವಶ್ಯಕ

 ತುಮಕೂರು:

      ವಿದ್ಯಾರ್ಥಿಗಳ ಸರ್ವತೋಮುಖ ವಿಕಸನಕ್ಕೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಸದಸ್ಯರಾಗುವುದು ಅತ್ಯವಶ್ಯಕವಾಗಿದೆ. ಈ ಚಳವಳಿಯ ಉದ್ದೇಶಕ್ಕೆ ವಸೂಲಿ ಮಾಡುವ ಶುಲ್ಕವನ್ನು ಕೇವಲ ಈ ಚಳವಳಿಯ ಕಾರ್ಯಕ್ರಮಗಳಿಗೆ ಮಾತ್ರ ಉಪಯೋಗಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಎಸ್.ನಾಗರತ್ನ ತಿಳಿಸಿದರು.

      ತುಮಕೂರಿನ ಚೇತನ ವಿದ್ಯಾಮಂದಿರದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ತುಮಕೂರು ಜಿಲ್ಲಾ ಸಂಸ್ಥೆ ವತಿಯಿಂದ ಸದ್ಭಾವನಾ ದಿನ ಹಾಗೂ ತುಮಕೂರು ಜಿಲ್ಲೆಯ ಕಾಲೇಜುಗಳ ರೋವರ್ ಸ್ಕೌಟ್ಸ್ ಲೀಡರ್ ಹಾಗೂ ರೇಂಜರ್ಸ್ ಲೀಡರ್‍ಗಳಿಗೆ ಒಂದು ದಿನದ ಸಾಮಾನ್ಯ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

      ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಶಾ ಪ್ರಸನ್ನಕುಮರ್ ರವರು ಮಾತನಾಡಿ ಈ ಚಳವಳಿಯ ಬಲವರ್ಧನೆಗೆ ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಅಧಿಕಾರಿಗಳು ಸಹಕಾರವನ್ನು ನೀಡುತ್ತಿದ್ದಾರೆ. ಸಮವಸ್ತ್ರವನ್ನು ಧರಿಸುವ ಚಳವಳಿಗಳಿಂದ ಯಾವುದೇ ಜಾತಿ ಮತಗಳ ಭೇದ ಭಾವವಿಲ್ಲದೆ ದೇಶಕ್ಕಾಗಿ ಬಾಳುವ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಮನೋಭಾವನೆಯನ್ನು ಕಲಿಸುತ್ತದೆ ಎಂದು ತಿಳಿಸಿದರು.

      ಬಿ ಎಂ ಬಿ ಶಾಸ್ತ್ರಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ವೇಣುಗೋಪಾಲ್, ಜಿಲ್ಲಾ ಸ್ಕೌಟ್ಸ್ ಆಯುಕ್ತರು, ಸುಭಾಷಿಣಿ ಆರ್ ಕುಮಾರ್, ಜಿಲ್ಲಾ ಗೈಡ್ಸ್ ಆಯುಕ್ತರು, ಸುರೇಂದ್ರ ಷಾ, ಕಾರ್ಯದರ್ಶಿಗಳು, ಡಾ|| ಮೋಹನ್ ಕುಮಾರ್, ಸಹಾಯಕ ಆಯುಕ್ತರು (ರೋವರ್ಸ್), ರಾಧಾ ಹೆಚ್ ಹೆಚ್, ಸಹಾಯಕ ಆಯುಕ್ತರು (ರೇಂಜರ್ಸ್), ಕೆಂಪರಂಗಯ್ಯ, ಸಹಾಯಕ ಆಯುಕ್ತರು, ಜಿಲ್ಲಾ ಸಂಘಟನಾಕಾರರಾದ ಗಂಗಾಂಬಿಕೆ, ಸುದೇಶ್ ಹಾಗೂ ಚೇತನಾ ವಿದ್ಯಾಮಂದಿರದ ಪ್ರಾಂಶುಪಾಲರಾದ ನಾಗರಾಜ್ ಉಪಸ್ಥಿತರಿದ್ದರು. ಆರ್ಯನ್ ಪ್ರೌಢಶಾಲೆಯ ರೂಪ, ಗೈಡ್ ಕ್ಯಾಪ್ಟನ್ ಅವರೊಂದಿಗೆ 20 ಗೈಡ್ಸ್ ಭಾಗವಹಿಸಿದ್ದರು. ಆಂಜಿನಪ್ಪ, ನಿವೃತ್ತ ಉಪನಿರ್ದೇಶಕರು ಕಾರ್ಯಕ್ರಮದಲ್ಲಿ ಸ್ವಾಗತಿಸಿ ಸುರೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

Recent Articles

spot_img

Related Stories

Share via
Copy link