ಹೈದರಾಬಾದ್:
ಎಲ್ಲರ ನಿರೀಕ್ಷೆಯಂತೆ ಏನಾದರೂ ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಭಾನುವಾರದಂದು ಸ್ವಯಂ ಪ್ರೇರಿತವಾಗಿ ವಿಧಾನಸಭೆ ವಿಸರ್ಜನೆಯ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ವರ್ಷ ನಾಲ್ಕು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಜತೆ ತೆಲಂಗಾಣದಲ್ಲೂ ನಡೆಯಲಿ ಎಂಬ ಲೆಕ್ಕಾಚಾರ ಹಾಕಿರುದಂತಿದೆ. ನಾಳೆ ಮಧ್ಯಾಹ್ನ ಒಂದು ಗಂಟೆಗೆ ತೆಲಂಗಾಣ ರಾಜ್ಯದ ಸಂಪುಟ ಸಭೆ ನಡೆಯಲಿದ್ದು ಅಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ವಿಸರ್ಜನೆಯ ಬಳಿಕ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಸಮಾವೇಶವೊಂದು ನಡೆಯಲಿದೆ ಎಂಬ ಮಾತು ಕೇಳಿಬರುತ್ತಿವೆ. ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ವತಿಯಿಂದ ರಂಗಾರೆಡ್ಡಿ ಜಿಲ್ಲೆಯಲ್ಲಿಯಲ್ಲಿ ಎರಡು ಸಾವಿರ ಎಕರೆ ಸ್ಥಳವನ್ನು ಗುರುತಿಸಿದ್ದು, ಅಲ್ಲಿ ಭಾನುವಾರ ಸಮಾವೇಶ ನಡೆಸಲಾಗುತ್ತಿದೆ ಎಂಬ ವರದಿ ಕೇಳಿ ಬಂದಿದೆ .
ಅದಕ್ಕೆ ಪ್ರಗತಿ ನಿವೇದನಾ ಸಭಾ ಎಂದು ಹೆಸರಿಡಲಾಗಿದೆ. ಮುಖ್ಯವಾದ ರಾಜಕೀಯ ಘೋಷಣೆಯೊಂದನ್ನು ನಮ್ಮ ನಾಯಕರಿಂದ ನಿರೀಕ್ಷೆ ಮಾಡಬಹುದು. ಈ ಸಭೆಯ ನಂತರ ರಾಜ್ಯದ ರಾಜಕೀಯ ವಾತಾವರಣವೇ ಖಂಡಿತಾ ಬಿಸಿಯೇರುತ್ತದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮಗ ಹಾಗೂ ಅವರ ಸಂಪುಟದಲ್ಲಿ ಸಚಿವರೂ ಆಗಿರುವ ಕೆ.ಟಿ.ರಾಮರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








