ಚೇಳೂರು.
ಆ 26 ಮತ್ತು 27 ರಂದು ಚೇಳೂರಿನಲ್ಲಿ ಶ್ರೀಭಾವಸಾರ ಕ್ಷೆತ್ರಿಯ ಸಮಾಜ ಹಾಗೂ ಶ್ರೀ ಪಾಂಡುರಂಗ ದೇವಸ್ಥಾದ ಅಭಿವೃದ್ಧಿ ಮಂಡಳಿವತಿಯಿಂದ 24 ನೇ ವರ್ಷದ ಶ್ರೀಪಾಂಡುರಂಗರುಖುಮಾಯಿಯವರ ದಿಂಡೀ ಉತ್ಸವ ನೆಡೆಯಲಿದೆ.
ದಿಂಡೀ ಉತ್ಸವದ ಅಂಗವಾಗಿ 26 ರಂದು ಚೇಳೂರಿನ ಶ್ರೀಪಾಂಡುರಂಗರುಕ್ಮೀಣಿ ದೇವಾಲಯದ ಅವರಣದಲ್ಲಿ ಸಂಜೆ ಪೋತಿ ಸ್ಥಾಪನೆಯೊಂದಿಗೆ ಪ್ರಾರಂಭಗೊಂಡು ಭಜನೆ,ಪ್ರವಚನ,ಕೀರ್ತನೆಗಳು ನೆಡೆಯಲಿದೆ. 27 ರಂದು ಬೆಳ್ಳಿಗೆ ಕಾಕಡಾರತಿ,ಜ್ಞಾನೇಶ್ವರಿ ಓವೀ ಪಾರಾಯಣದ 9 ಮತ್ತು 12 ನೇ ಅಧ್ಯಾಯ ಹ.ಭ.ಪ.ಶ್ರೀ ಡಿ.ಎಸ್.ತುಕಾರಾಂಸ್ವಾಮಿಗಳ ನೇತೃತ್ವದಲಿ ನೆಡೆಯಲಿದೆ.
ಸ್ವಾಮಿಯವರ ಮಯೂರ ವಾಹನ ಉತ್ಸವ ಊರಿನ ಪ್ರಮುಖ ಬೀದಿಯಲ್ಲಿ ಕಾಲಾಕೀರ್ತನೆಯೊಂದಿಗೆ ನೆಡೆದು ನಂತರ ನೆಡೆಯುವ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯವನ್ನು ಗೊಂದಿಶ್ರಮದ ಶ್ರೀನಾಮದೇವಾನಂದಭಾರತಿ ಸ್ವಾಮೀಜಿ ಹ.ಭ.ಪ.ಶ್ರೀತುಕಾರಾಂಸ್ವಾಮಿಜೀ ವಹಿಸುವರು ಸಣ್ಣಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಉದ್ಘಾಟಿಸುವರು. ಸಮಾಜದ ಅಧ್ಯಕ್ಷ ಸಿ.ಟಿ.ಕಾಂತರಾಜರಾವ್ ಅಧ್ಯಕ್ಷತೆಯನ್ನುವಹಿಸಿವರು,ಸಮಾಜದ ಗೌರವಧ್ಯಕ್ಷ ಹಚ್.ಕೆ.ಗಂಗಾಧರರಾವ್,ಎ.ಐ.ಬಿ.ಕೆಯ ರಾಜ್ಯಾಧ್ಯಕ್ಷ ಸುಧೀರ್‍ನವಲೆ,ಉಪಾಧ್ಯಕ್ಷ ಪಿ.ಎಸ್.ಗುರುಪ್ರಸಾಧ್,ಅಧ್ಯಕ್ಷರ ವಿಶೇಷ ಪ್ರತಿನಿಧಿ ಸತ್ಯನಾರಾಯಣರಾವ್,ಹೆಚ್ಚುವರಿ ಕಾರ್ಯದರ್ಶಿ ಎನ್.ವಿ.ಶ್ರೀನಿವಾಸ್,ಜಿಲ್ಲಾಧ್ಯಕ್ಷ ಸತ್ಯನಾರಾಯಣರಾವ್, ಕಾರ್ಯದರ್ಶಿ ರಾಮಲಿಂಗರಾವ್,ಜಿಪಂ ಸದಸ್ಯೆ ಕೆ.ಆರ್.ಬಾರತಿಹಿತೇಶ್,ತಾಪಂ ಸದಸ್ಯ ಕೆಂಪರಾಜು,ಗ್ರಾಪಂ ಅಧ್ಯಕ್ಷೆ ಗಂಗಮ್ಮ,ಉಪಾಧ್ಯಕ್ಷೆ ನಾಗರತ್ನಮ್ಮ, ತುಮಕೂರಿನ ಕೆ.ಎಸ್.ಆರ್.ಟಿ.ಸಿ.ಡಿಪೋ ಮ್ಯಾನೇಜರ್ ಗಜೇಂದ್ರಕುಮಾರ್,ಬೆಳ್ಳಾವಿ ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್‍ನ್ನ ಕಾರ್ಯದರ್ಶಿ ಡಿ.ಎಸ್.ಸತೀಶ್‍ಕುಮಾರ್,ವಿ.ಎಸ್.ಎಸ್.ಎನ್.ನ್ನು ಅಧ್ಯಕ್ಷ ಸಿ.ಎಂ.ಹಿತೇಶ್,ಮಾಜಿ ಪ್ರಧಾನ ಸಿ.ಎನ್,ತಿಮ್ಮೇಗೌಡ್ರು, ಆರ್ಯವೈಶ್ಯ ಮಂಡಲಿ ಅಧ್ಯಕ್ಷ ಪಧ್ಮನಾಭಶ್ರೇಷ್ಠಿ,ಗಾಯತ್ರಿ ಸಮಾಜದ ಅಧ್ಯಕ್ಷ ಸಿ.ಎಸ್.ವಿಶ್ವನಾಥರಾವ್,ವಾರಕಾರಿಗಳು,ಸಮಾಜಭಾಂದವರುಗಳು ಭಾಗವಹಿಸುವರು
