ನವದೆಹಲಿ 
ಗೃಹ ಸಚಿವ ಅಮಿತ್ ಶಾ ಅವರು ರಕ್ಷಣಾ ವಲಯಕ್ಕೆ ಸಂಬಂಧ ಪಟ್ಟ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದು. ಜಮ್ಮು ಮತ್ತು ಕಾಶ್ಮೀರ ದಲ್ಲಿ ಉದ್ವಿಗ್ನತೆ ಉಂಟಾಗಿರುವ ಸಮಯದಲ್ಲಿ ನಡೆದ ಈ ಸಭೆ ಅತ್ಯಂತ ಮಹತ್ವದ್ದಾಗಿದೆ. ಗುಪ್ತಚರ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರೆ ಸೇನಾ ಪಡೆಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಸಭೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗುಪ್ತಚರ ಬ್ಯೂರೋ ಮುಖ್ಯಸ್ಥ ಅರವಿಂದ್ ಕುಮಾರ್, ರಾ ಮುಖ್ಯಸ್ಥರಾದ ಸಮಂತ್ ಗೋಯೆಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಉಪಸ್ಥಿತರಿದ್ದರು.
ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಅಮರನಾಥ ಯಾತ್ರೆಯ ಯಾತ್ರಿಕರಿಗೆ ಯಾತ್ರೆ ನಡೆಸದಂತೆ ಸೂಚನೆ ನೀಡಿತು. ಜನರು ಆದಷ್ಟು ಬೇಗ ಹೊರಹೋಗುವಂತೆ ಅದು ಕೇಳಿದ್ದು. ಅಮರನಾಥ ಯಾತ್ರೆಯ ಮಾರ್ಗದಲ್ಲಿ ಭಾರತೀಯ ಸೇನೆಯು ಮದ್ದುಗುಂಡು ಮತ್ತು ಸ್ನೈಪರ್ ರೈಫಲ್ ಹಿಡಿದ ಶಸ್ತ್ರ ಸಜ್ಜಿತ ಸೈನಿಕರನ್ನು ನಿಯೋಜನೆ ಗೊಳಿಸಿ ಆದೇಶ .
ಶನಿವಾರ, ಭಾರತೀಯ ಸೇನೆಯು ಪಾಕಿಸ್ತಾನದ ಬಾರ್ಡರ್ ಆಕ್ಷನ್ ತಂಡವು (ಬಿಎಟಿ ಎಂದು ಕರೆಯಲ್ಪಡುತ್ತದೆ) ಕೇರನ್ ವಲಯದ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ಫಾರ್ವರ್ಡ್ ಪೋಸ್ಟ್ ಮೇಲೆ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಸೇನೆಯು ಐದರಿಂದ ಏಳು ನುಸುಳುಕೊರರನ್ನು ಕೊಂದಿತು.








