ಬೆಂಗಳೂರು
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ದಿಢೀರ್ ನಗರದ ಬನಶಂಕರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣೆಯಲ್ಲಿನ ಅವ್ಯವಸ್ಥೆಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಶುಚಿಯಾಗಿಟ್ಟುಕೊಳ್ಳದಿರುವುದು ದಾಖಲಾತಿಗಳನ್ನು ವ್ಯವಸ್ಥಿತ ಜೋಡಿಸದಿರುವುದು ಧೂಳು ಆವರಿಸಿರುವುದು ಇನ್ನಿತರ ಠಾಣೆಯಲ್ಲಿನ ಅವ್ಯವಸ್ಥೆಯನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿ ಮುಂದೆ ಠಾಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಶುಚಿತ್ವಕ್ಕೆ ಗಮನ ನೀಡಬೇಕು ಇಲ್ಲದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಠಾಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪಿಎಸ್ಐ ಹಾಗೂ ಮುಖ್ಯಪೇದೆ ಇರದಿರುವುದನ್ನು ನೋಡಿ ಗರಂ ಆಗಿ ಠಾಣೆ ನಿರ್ವಹಣೆಗೆ ನೀಡಲಾಗುತ್ತಿರುವ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದರು.ಠಾಣೆಯಲ್ಲಿನ ಗಲೀಜು ನೋಡಿ ಇನ್ಮುಂದೆ ಯಾವುದೇ ಕಾರಣಕ್ಕೂ ಇದಾವುದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ ಭಾಸ್ಕರರಾವ್ ಠಾಣೆಗಳ ಶುಚಿಯಾಗಿ ಇರಬೇಕು ಎಂದು ನಗರದ ಪೊಲೀಸ್ ಠಾಣೆಗಳಿಗೆ ಅವರು ವಾಕಿ ಟಾಕಿ ಮೂಲಕ ಸೂಚನೆ ನೀಡಿ ನಾನು ಯಾವುದೇ ಕ್ಷಣದಲ್ಲೂಕೂಡ ಭೇಟಿ ನೀಡಬಹುದು ಎಂದು ಹೇಳಿದರು.ಠಾಣೆಯನ್ನು ಶುಚಿಯಾಗಿಟ್ಟುಕೊಳ್ಳದಿರುವುದು ಶಿಸ್ತು ಮೀರಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








