ಬೆಂಗಳೂರು,
ವೈದ್ಯಕೀಯ ಸೀಟು ಕೊಡಿಸುವ ನಂಬಿಕೆ ಹುಟ್ಟಿಸಿ ನಂತರ ವಿವಾಹವಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಕೋಚಿಂಗ್ ಸೆಂಟರ್ನ ಪ್ರಾಚಾರ್ಯನಿಗಾಗಿ ರಾಮಮೂರ್ತಿನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ರಾಮಮೂರ್ತಿನಗರದ ಅಂಬರ್ಲೇ ಔಟ್ನಲ್ಲಿರುವ ಸಿದ್ದಿ ಕ್ಲಾಸ್ನಲ್ಲಿ ವೈದ್ಯಕೀಯ ಕೋರ್ಸ್ಗಾಗಿ ಸಂತ್ರಸ್ತೆ ಸೇರಿಕೊಂಡಿದ್ದು ಕಾಲೇಜಿನ ಜನರಲ್ ಮ್ಯಾನೇಜರ್ ಆಂಡ್ ಪ್ರಾಂಶುಪಾಲ ನಿರಂಜನ್ ಗೌಡ ಸಂತ್ರಸ್ತೆ ಭೌತಶಾಸ್ತ್ರ ವಿಷಯದಲ್ಲಿ ಪರಿಣಿತಿ ಹೊಂದದಿದ್ದರಿಂದ ಅವಳ ಜೊತೆ ಮೊದಲು ಸ್ನೇಹ ಬೆಳೆಸಿ, ನಂತರ ಪ್ರೀತಿ ಮಾಡುವುದಾಗಿ ನಂಬಿಸಿದ್ದ
ಜೊತೆಗೆ ಪಾಠ ಹೆಳುವ ನೆಪದಲ್ಲಿ ಯುವತಿಯನ್ನು ಭೇಟಿಯಾಗಿ ಸಲುಗೆ ಬೆಳೆಸಿದ್ದ.ಇನ್ನು ಸಂತ್ರಸ್ತೆ ಪಿಣ್ಯ ಬಳಿ ತಂದೆ ತಾಯಿ ಜೊತೆ ವಾಸವಿದ್ದು, ತಾಯಿ ತಂದೆ ಇಲ್ಲದ ಸಂದರ್ಭದಲ್ಲಿ ಪಾಠ ಹೇಳಿಕೊಡುವ ನೆಪದಲ್ಲಿ ಮನೆಗೆ ತೆರಳಿ ನಿನ್ನನ್ನು ಮದುವೆಯಾಗುತ್ತೇನೆ.ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ.ನೊಂದ ಸಂತ್ರಸ್ತೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.ಪೊಲೀಸರು ನಿರಂಜನ್ ಗೌಡ ವಿರುದ್ಧ 376, 420 ಅಡಿಯಲ್ಲಿ ಪ್ರಕರಣ ದಾಖಲಿಸಿ ತಲೆ ಮರೆಸಿಕೊಂಡಿರುವ ನಿರಂಜನ್ಗೆ ಶೋಧ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








