ನದಿ ದಂಡೆಯಲ್ಲಿ ಹೂತ್ತಿಟ್ಟಿದ್ದ 12 ಕೆಜಿ ಚಿನ್ನ ವಶ..!

ಬೆಂಗಳೂರು

      ತಮಿಳುನಾಡಿನ ತಿರುಚಿಯಲ್ಲಿ ಲಲಿತಾ ಜ್ಯುವೆಲಱ್ಸ್‌ನಲ್ಲಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಕಳವು ಕೃತ್ಯ ನಡೆಸಿದ್ದ ಕುಖ್ಯಾತ ಅಂತರರಾಜ್ಯ ಕಳ್ಳ ಮುರುಗನ್‌ನನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಬೊಮ್ಮನಹಳ್ಳಿ ಪೊಲೀಸರು ಬಂಧಿತನು, ತಿರುಚಿಯ ನದಿ ದಡ ಪೊದೆಯೊಂದರಲ್ಲಿ ಗುಂಡಿ ತೋಡಿ ಹೂತಿಟ್ಟಿದ್ದ ಬಚ್ಚಿಟ್ಟಿದ್ದ 5 ಕೋಟಿ ಮೌಲ್ಯದ 12 ಕೆಜಿ ಚಿನ್ನ, ವಜ್ರ, ಪ್ಲಾಟಿನಂ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

     ತಮಿಳುನಾಡಿನ ತಿರುಚನಾಪಳ್ಳಿಯ ತಿರುವಂಬೂರ್‌ನ ಮುರುಗನ್ (೪೫) ಬಂಧಿತ ಆರೋಪಿಯಾಗಿದ್ದಾನೆ,ಕಳವು ಕೃತ್ಯಗಳಲ್ಲಿ ಜೈಲಿಗೆ ಹೋಗಿ ಜಾಮೀನು ಪಡೆದು ಬಿಡುಗಡೆಯಾಗಿ ಬಂದ ನಂತರ ಮತ್ತೆ ಕಳವು ಕೃತ್ಯ ನಡೆಸುತ್ತಿದ್ದನು.ಬಾಲ,ಬಾಲ ಮುರುಗನ್, ಶಿವಕುಮಾರ್ ಹಾಗೂ ಶಿವ ಇನ್ನಿತರ ಹೆಸರುಗಳಲ್ಲಿ ಕಳವು ಕೃತ್ಯ ನಡೆಸುತ್ತಿದ್ದ. ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶದ ವಿವಿಧೆಡೆ ಮನೆ ಹಾಗೂ ಬ್ಯಾಂಕ್ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

     ಆರೋಪಿಯು ಹೆಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ ಸೇರಿದಂತೆ ನಗರದ ವಿವಿಧೆಡೆ ಕನ್ನಗಳವು ಮಾಡಿದ್ದ ಚಿನ್ನಾಭರಣಗಳು, ತಿರುಚಿತ ಲಲಿತಾ ಜ್ಯುವೆಲಱ್ಸ್ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಕಳವು ಮಾಡಿದ್ದ ಆಭರಣಗಳನ್ನು ತಿರುಚಿಯ ನದಿ ದಡದ ಪೊದೆಯೊಂದರ ಬಳಿ ಗುಂಡಿ ತೋಡಿ ಹೂತಿಟ್ಟಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

     ಬೊಮ್ಮನಹಳ್ಳಿಯಲ್ಲಿ ನಡೆದಿದ್ದ ಕನ್ನಗಳವು ಕೃತ್ಯವನ್ನು ದಾಖಲಿಸಿಕೊಂಡಿದ್ದ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ನೇತೃತ್ವದ ವಿಶೇಷ ತಂಡ ಖಚಿತ ಮಾಹಿತಿ ಮೇರೆಗೆ ಮುರುಗನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಕನ್ನಗಳವು ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ.

     ಬಂಧಿತನಿಂದ ,೫ ಕೋಟಿ ಬೆಲೆಯ ಚಿನ್ನ, ವಜ್ರ, ಪ್ಲಾಟಿನಂ ಆಭರಣಗಳು, ಕೃತ್ಯಕ್ಕೆ ಬಳಸುತ್ತಿದ್ದ ತವೇರಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಬಾಣಸವಾಡಿ, ಮಡಿವಾಳ, ಹೆಚ್‌ಎಸ್‌ಆರ್ ಲೇಔಟ್, ಅಮೃತಹಳ್ಳಿ, ನೆಲಮಂಗಲ, ಆನೇಕಲ್‌ಗಳಲ್ಲಿ ನಡೆದಿದ್ದ ಕಳ್ಳತನ ಕೃತ್ಯಗಳು ಪತ್ತೆಯಾಗಿವೆ.

    ಆಂಧ್ರಪ್ರದೇಶದ ಹಲವು ಬ್ಯಾಂಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ನಗರ ಪೊಲೀಸ್ ಆಯುಕ್ತ ಭಾಸ್ತರರಾವ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮುರುಗನ್, ಉಮೇಶ್ ಕುಮಾರ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ, ಇಶಾಪಂತ್ ಅವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link