ಬೆಂಗಳೂರು
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾಜಿ ಕೇಂದ್ರ ಸಚಿವ ಜಾಲಪ್ಪ ಅವರ ಮನೆ ಶಿಕ್ಷಣ ಸಂಸ್ಥೆಗಳ ಮೇಲಿನ ಆದಾಯ ತೆರಿಗೆ ಅಧಿಕಾರಿಗಳ ದಾಳಿಯ ಹಿಂದೆ, ಮಡಿಕಲ್ ಸೀಟ್ ಮಾಫಿಯಾ ದಂಧೆಯೇ ಕಾರಣವಾಗಿದೆ.ನೀಟ್ ಪರೀಕ್ಷೆಯಲ್ಲಿ ರ್‍ಯಾಂಕಿಂಗ್ ಪಡೆಯದವರಿಗೂ ಮೆಡಿಕಲ್ ಸೀಟ್ ನೀಡಿದ್ದಲ್ಲದೇ, ಕೌನ್ಸಲಿಂಗ್ ನಡೆಸದೇ ೨೯ ಸೀಟು ಹಂಚಿಕೆ ಮಾಡಿದ್ದಕ್ಕೆ ಹೈಕೋರ್ಟ್‌ಗೆ ಮಹಿಳೆಯೊಬ್ಬರು ಮೆಟ್ಟಿಲೇರಿದ್ದರು. ಹೀಗಾಗಿಯೇ ಐಟಿ ಅಧಿಕಾರಿಗಳ ದಾಳಿ ಕೂಡ ಈ ಎರಡು ಶಿಕ್ಷಣ ಸಂಸ್ಧೆಗಳ ಮೇಲೆ ನಡೆದಿರುವುದು ಬಹಿರಂಗವಾಗಿದೆ.
ಡಾ.ಜಿ.ಪರಮೇಶ್ವರ್ ಹಾಗೂ ಜಾಲಪ್ಪ ಒಡೆತನದ ಕಾಲೇಜುಗಳ ಮೇಲಿನ ಐಟಿ ಅಧಿಕಾರಿಗಳ ದಾಳಿಯ ಹಿಂದೆ ಮಡಿಕಲ್ ಸೀಟ್ ಮಾಫಿಯಾ ಎಂಬುದು ಒಂದು ಕಾರಣವಾದರೇ, ಇದೇ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಕೋಲಾರ ಮೂಲದ ಜಯಂತಿಯವರೂ, ದಾಳಿಯ ಹಿಂದೆ ಮತ್ತೊಬ್ಬ ಕಾರಣ ಕರ್ತರಾಗಿದ್ದಾರೆ.
ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಹಂಚಿಕೆಗೆ ಕೆಲ ನೀತಿ ನಿಯಮಗಳಿರುತ್ತವೆ. ಅದರಲ್ಲೂ ಖಚಿಟಿಞiಟಿg ಪಡೆದ ವಿದ್ಯಾರ್ಥಿಗಳಿಗೆ ಸೀಟ್ ಹಂಚಿಕೆ ಮಾಡಬೇಕು ಎಂಬ ನಿಯಮಗಳಿವೆ. ಆದರೆ ಅದ್ಯಾವುದನ್ನು ಸಿದ್ಧಾರ್ಥ ಮೆಡಿಕಲ್ ಕಾಲೇಜ್ ನಲ್ಲಿ ಇದೆಲ್ಲಾವನ್ನು ಗಾಳಿಗೆ ತೂರಲಾಗಿದೆ. ೨೯ ಮೆಡಿಕಲ್ ಸೀಟ್ ಗಳನ್ನು ಕೌನ್ಸಿಲಿಂಗ್ ಗಳನ್ನೇ ನಡೆಸದೇ ಸೀಟ್ ಹಂಚಿಕೆ ಮಾಡಲಾಗಿದೆ ಎಂದು ಜಯಂತಿ ಆರೋಪಿಸಿದ್ದಾರೆ.
ಇದಕ್ಕೆ ಕಾರಣ, ಅವರ ಮಗನಿಗೆ ಮೆಡಿಕಲ್ ಸೀಟ್ ಮಾಫಿಯಾದಿಂದ ಆದ ಅನ್ಯಾಯವಾಗಿದೆ. ಜಾಲಪ್ಪ ಹಾಗೂ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕೌನ್ಸಿಲಿಂಗ್ ನಲ್ಲಿ ಮೆಡಿಕಲ್ ಸೀಟ್ ಮಾಫಿಯಾ ದಂಧೆಗೆ ಸೀಟ್ ಸಿಕ್ಕಿಲ್ಲ. ಇದೇ ಕಾರಣವನ್ನು ಪ್ರಶ್ನಿಸಿದ್ದಕ್ಕೆ, ಸೀಟ್ ನೀಡಲಾಗುತ್ತೇ, ನೀಡಲಾಗುತ್ತೆ ಎಂದು ಹೇಳಿ, ಕೊನೆಗೆ ಕೊಡದೇ ಮೋಸ ಮಾಡಿದ್ದಕ್ಕೆ ದಂಧೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಿದ್ಧಾರ್ಥ ಮೆಡಿಕಲ್ ಕಾಲೇಜು ಹಾಗೂ ಜಾಲಪ್ಪ ಶಿಕ್ಷಣ ಸಂಸ್ಥೆಯಾದಂತ ದೇವರಾಜ್ ಅರಸು ಮೆಡಿಕಲ್ ಕಾಲೇಜ್ ಮಾಫಿಯಾದ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮೆಡಿಕಲ್ ಸೀಟ್ ಮಾಫಿಯಾ ದಂಧೆಗೆ ಕಡಿವಾಣ ಹಾಕಲು ಇಂತಹ ಕಾಲೇಜುಗಳಿಗೆ ಸೂಚಿಸುವಂತೆ ಮನವಿ ಮಾಡಿದ್ದು, ಬಡ ವಿದ್ಯಾರ್ಥಿಗಳಿಗೆ ಸೀಟ್ ಸಿಗುವಂತೆ ಮಾಡಲು ಕೋರಿಕೊಂಡಿದ್ದಾರೆ.
ಒಟ್ಟಾರೆಯಾಗಿ ಸಿದ್ದಾರ್ಥ ಮೆಡಿಕಲ್ ಕಾಲೇಜು ಮತ್ತು ದೇವರಾಜ್ ಅರಸು ಮೆಡಿಕಲ್ ಕಾಲೇಜುಗಳ ಸರಸ್ವತಿ ದೇವಿಯ ಜೂಜಾಟ ಮಾಡುತ್ತಿರುವುದರ ವಿರುದ್ಧ ಧ್ವನಿ ಎತ್ತಿರುವ ಜಯಂತಿ ಅವರ ಕಾರಣದಿಂದಾಗಿಯೇ ಐಟಿ ದಾಳಿ ನಡೆದಿದ್ಯಾ ಎಂಬ ಕಾರಣಕ್ಕೂ ಎಡೆ ಮಾಡಿಕೊಟ್ಟಿದೆ. ಅಲ್ಲದೇ ಇಂತಹ ಸೀಟ್ ವಂಚಿತರಿಗೆ ಹೈಕೋರ್ಟ್ ನಲ್ಲಿ ನ್ಯಾಯ ಸಿಗಲಿ. ಮೆಡಿಕಲ್ ಸೀಟ್ ಮಾಫಿಯಾ ದಂಧೆಗೆ ಕಡಿವಾಣ ಹಾಕಲಿ ಎಂಬುದು ಅವರ ಮನವಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








