ಬೆಂಗಳೂರು:

ಮಾಜಿ ಸಿಎಂ ಸಿದ್ದರಾಮಯ್ಯ ರವರ ಭಾಷಣ ಕೇಳಿ ಹಾಲಿ ಸಿಎಂ ಯಡಿಯೂರಪ್ಪ ರವರು ಭಾವುಕರಾಗಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 78ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಈ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಜಕೀಯ ವೈರತ್ವ ಮರೆತು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ಬಿಎಸ್ ವೈಗೆ ಅಭಿನಂದನೆ ಸಲ್ಲಿಸಿದರು.
ನಮ್ಮಿಬ್ಬರ ರಾಜಕೀಯ ಸಿದ್ಧಾಂತಗಳು ಬೇರೆಯೇ ಇರಬಹುದು. ಆದರೆ ಅದೆಲ್ಲಕ್ಕಿಂತಲೂ ಮಾನವ ಸಂಬಂಧ ದೊಡ್ಡದು. ಅವರ ರಾಜಕೀಯ ಹೋರಾಟದಿಂದಲೇ ಮೇಲೆ ಬಂದವರು. 100 ವರ್ಷಕ್ಕೂ ಹೆಚ್ಚು ಕಾಲ ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಡಲಿ ಎಂದು ಸಿದ್ಧರಾಮಯ್ಯ ಹಾರೈಸಿದಾಗ ವೇದಿಕೆಯಲ್ಲಿದ್ದ ಸಿಎಂ ಯಡಿಯೂರಪ್ಪ ಭಾವುಕರಾದರಲ್ಲದೆ, ಕಣ್ಣಂಚಲ್ಲಿ ಬಂದ ಹನಿ ನೀರನ್ನು ಒರೆಸಿಕೊಂಡ ದೃಶ್ಯ ಕಂಡುಬಂತು.
ಭಾಷಣ ಕೇಳಿ ಸ್ವತಃ ಭಾವುಕರಾದ ಸಿಎಂ ಬಿಎಸ್ ವೈ ಬಳಿಕ ಸಿದ್ಧರಾಮಯ್ಯರಿಂದಲೇ ಈ ಕಾರ್ಯಕ್ರಮಕ್ಕೆ ಕಳೆ ಬಂತು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








