ಸ್ಮಶಾನ, ಬಸ್ ಬೇಕು ಕನ್ನನಾಯಕನಕಟ್ಟೆ ಗ್ರಾಮವಾಸ್ತವ್ಯದಲ್ಲಿ ಕೇಳಿಬಂದ ಬೇಡಿಕೆ.

ಕೊಟ್ಟೂರು:


ಸುಂದರ ಮತ್ತು ಪರಿಸರ ಕಾಳಜಿಯಿಂದಾಗಿ ರಾಜ್ಯದಲ್ಲೇ ಪ್ರಸಿದ್ದಿ ಪಡೆದಿರುವ ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದವರು ಮರಣ ಹೊಂದಿದವರನ್ನು ಅಂತ್ಯಸಂಸ್ಕಾರ ನೆರೆವೇರಿಸಲು ಸ್ಮಶಾನ ಇಲ್ಲವಾಗಿದೆ. ಸಿ.ಸಿ.ರಸ್ತೆ ಸಹ ಗ್ರಾಮದ ಕೆಲವಡೆ ಆಗಬೇಕಿದೆ. ಹಾಸ್ಟೆಲ್ ನಿರ್ಮಾಣದ ಅವಶ್ಯವಿದೆ. ಇವುಗಳ ಬೇಡಿಕೆಯನ್ನು ತಾಲೂಕು ಆಡಳಿತ ಈಡೇರಿಸಬೇಕೆಂಬ ಹಕ್ಕೋತ್ತಾಯ ಕೊಟ್ಟೂರು ತಾಲೂಕಿನ ಕೊಟ್ಟೂರು ತಾಲೂಕು ಆಡಳಿತ ಕೈಗೊಂಡ ಗ್ರಾಮ ವಾಸ್ತವ್ಯದಲ್ಲಿ ಸಹಾಯಕ ಆಯುಕ್ತರಿಗೆ ಕೇಳಿ ಬಂದ ಪ್ರಮುಖ ಸಮಸ್ಯೆಗಳಾಗಿವೆ.
ಕೊಟ್ಟೂರು ತಾಲೂಕು ಆಡಳಿತದ ವತಿಯಿಂದ ಕನ್ನನಾಯಕನಕಟ್ಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಂದಾಯ ನಡಿಗೆ ರೈತರ ಮನೆಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥ ರಾಜಪ್ಪ ಈ ಬೇಡಿಕೆಯನ್ನು ಮುಂದಿಟ್ಟು ಗ್ರಾಮದ ಅಭಿವೃದ್ದಿಗೆ ಸಹಕರಿಸುವಂತೆ ಬೇಡಿಕೊಂಡ ಪರಿ ಇದು.

ಹರಪನಹಳ್ಳಿ ಉಪವಿಭಾಗದ ಸಹಾಯಕ ಆಯುಕ್ತ ಹೆಚ್.ಜಿ.ಚಂದ್ರಶೇಖರಯ್ಯ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಮ್ಮ ಕುಂದು ಕೊರತೆಗಳ ಆಲಿಕೆಗೆ ಗ್ರಾಮಸ್ಥರಿಗೆ ಅವಕಾಶ ಮಾಡಿಕೊಡುತ್ತಿದ್ದಂತೆ ಈ ಬೇಡಿಕೆಗಳು ಈಡೇರಬೇಕೆಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಹಾಯಕ ಆಯುಕ್ತ ಹೆಚ್.ಜಿ.ಚಂದ್ರಶೇಖರ ಗ್ರಾಮಕ್ಕೆ ಸ್ಮಶಾನ ಬೇಡಿಕೆಯನ್ನು ಈಡೇರಿಸುವ ವ್ಯಾಪ್ತಿ ಕಂದಾಯ ಇಲಾಖೆಯಾದಾಗಿದ್ದು ಕೊಟ್ಟೂರು ತಹಶೀಲ್ದಾರ್ ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲ ಸ್ಥಳಗಳನ್ನು ವೀಕ್ಷಿಸಿ ಸ್ಮಶಾನ ಮಂಜೂರು ಮಾಡಲಿದ್ದಾರೆ ಎಂದು ಪ್ರಕಟಿಸಿದರು. ಆದರೆ ಹಾಸ್ಟೆಲ್ ನಿರ್ಮಾಣ ವಸತಿಯುತ ಶಾಲೆಗಳ ನಿರ್ಮಾಣ ಬೇಡಿಕೆ ಸರ್ಕಾರ ಮಂಜೂರು ಮಾಡಬೇಕಿದ್ದು ಸಂಬಂಧಪಟ್ಟ ಜನಪ್ರತಿನಿ„ಗಳು ಗಮನ ಸೆಳೆಯುವುದಾಗಿ ಆಶ್ವಾಸನೆ ನೀಡಿದರು.

ಇದಕ್ಕೂ ಮೊದಲು ಸಭೆಯನ್ನುದ್ದೇಶಿ ಮಾತನಾಡಿದ ಸಹಾಯಕ ಆಯುಕ್ತ ಹೆಚ್.ಜಿ.ಚಂದ್ರಶೇಖರಯ್ಯ ಕಂದಾಯ ಇಲಾಖೆ ಪ್ರತಿ ತಿಂಗಳ 3ನೇ ಶನಿವಾರದಂದು ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಗ್ರಾಮಗಳ ಮತ್ತು ಗ್ರಾಮಸ್ಥರ ಕುಂದು ಕೊರತೆಗಳನ್ನು ನಿವಾರಣೆ ಮಾಡಿಕೊಳ್ಳಲು ಈ ಕಾರಣದಿಂದ ಇದರ ಪ್ರಯೋಜನವನ್ನು ಸಾರ್ಥಕವಾಗಿ ಪಡೆದುಕೊಳ್ಳುವತ್ತಾ ಮುಂದಾಗಬೇಕೆಂದು ಅವರು ಕರೆ ನೀಡಿದರು. ನಂತರ ಸಹಾಯಕ ಆಯುಕ್ತರು ಗ್ರಾಮದ ವಿವಿಧಡೆ ಸಂಚರಿಸಿ ಪ್ರತಿ ಮನೆ ಮತ್ತು ಪ್ರದೇಶಗಳ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರಲ್ಲದೇ ಸ್ಥಳದಲ್ಲೇ ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಕೊಡುವಲ್ಲಿ ನೆರವಾದರು.

ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಕೊಟ್ರೇಶ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಎಂ.ಕುಮಾರಸ್ವಾಮಿ, ತಾಲೂಕು ಪಂಚಾಯಿತಿ ಇ.ಓ ತಿಮ್ಮಣ್ಣ ಹುಲುಮನಿ, ವೈದ್ಯಾ„ಕಾರಿ ಡಾ.ಬದ್ಯಾನಾಯ್ಕ, ಲೋಕಪಯೋಗಿ ಇಂಜೀನಿಯರ್ ಮಹಮ್ಮದ್ ಖಾದರ್, ಪಂಚಾಯತ್ ರಾಜ್ ಇಲಾಖೆಯ ಇಂಜೀನಿಯರ್ ರುದ್ರೇಶ, ಕೃಷಿ ಇಲಾಖೆಯ ಅ„ಕಾರಿ ಶ್ಯಾಮ್ ಸುಂದರ, ಶಿಕ್ಷಣ ಇಲಾಖೆ ಇ.ಸಿ.ಓ ಅಜ್ಜಪ್ಪ, ಬಿ.ಸಿ.ಎಂ.ಇಲಾಖಾಧಿಕಾರಿ ಬಸವರಾಜ್ ಸೇರಿದಂತೆ ಇನ್ನೀತರ ಇಲಾಖೆಯ ಅ„ಕಾರಿಗಳು ಗ್ರಾಮವಾಸ್ತವ್ಯದಲ್ಲಿ ಹಾಜರಿದ್ದರು. ಸಿ.ಮ.ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು.
17 ಕೊಟ್ಟೂರು 01 : ತಾಲೂಕು ಇಲಾಖೆಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹಿನ್ನಲೆಯಲ್ಲಿ ಕೊಟ್ಟೂರು ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದಲ್ಲಿ ಸಹಾಯಕ ಆಯುಕ್ತ ಹೆಚ್.ಜಿ.ಚಂದ್ರಶೇಖರಯ್ಯ, ತಹಶೀಲ್ದಾರ್ ಎಂ.ಕುಮಾರಸ್ವಾಮಿಯವರೊಂದಿಗೆ ಶನಿವಾರ ಸಂಚರಿಸಿ ಗ್ರಾಮಸ್ಥರ ಕುಂದು ಕೊರತೆ ಆಲಿಸಿದರು.

ಬಾಕ್ಸ್ ಐಟಮ್ ಸುದ್ದಿ : ತಡವಾಗಿ ಬಂದ ಎ.ಸಿ.
ಕನ್ನನಾಯಕನಕಟ್ಟೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹಿನ್ನಲೆಯಲ್ಲಿ ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳ ಜನತೆ ವಿವಿಧ ಕುಂದು ಕೊರತೆಗಳ ನಿವಾರಣೆಗೆ ಆಗಮಿಸಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಕ್ಕಾಗಿನೇ ಕಾಯುತ್ತಿದ್ದರು. ಆದರೆ ಸಹಾಯಕ ಆಯುಕ್ತ ಹೆಚ್.ಜಿ.ಚಂದ್ರಶೇಖರಯ್ಯ ಸುಮಾರು 1.30 ತಾಸು ತಡವಾಗಿ ಆಗಮಿಸಿದ್ದರಿಂದ ಬೆಳಿಗ್ಗೆ 10.30 ರ ಬದಲಾಗಿ ಬೆಳಿಗ್ಗೆ 11.45ರ ಸುಮಾರಿಗೆ ಆರಂಭಗೊಂಡಿತು. ಅಷ್ಟೋತ್ತಿಗಾಗಲೇ ನೆರೆದಿದ್ದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿ ವಾಪಾಸ್ ಹೊರಡಲು ಅನುವಾಗಿದ್ದರು.

Recent Articles

spot_img

Related Stories

Share via
Copy link