100 ಪೊಲೀಸ್ ಠಾಣೆ ನಿರ್ಮಾಣ : 200 ಕೋಟಿ ಮೀಸಲು

ಚಿಕ್ಕನಾಯಕನಹಳ್ಳಿ:


ಚಿ.ನಾ.ಹಳ್ಳಿ ಠಾಣೆಯ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಸಚಿವ ಮಾಧುಸ್ವಾಮಿ ನುಡಿ

  ರಾಜ್ಯದಲ್ಲಿ ಮುಂದಿನ ನಾಲ್ಕು ವರ್ಷಗಳÀ ಅವಧಿಯಲಿ 100 ಪೆÇಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲು 200 ಕೋಟಿ ರೂ. ಹಣವನ್ನು ಮೀಸಲಿರಿಸಿದ್ದೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ನೂತನ ಪೆÇಲೀಸ್ ಠಾಣೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಾರದ ಸ್ಥಿತಿಯಲ್ಲಿದ್ದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ ಉತ್ತಮ ಕಟ್ಟಡಗಳನ್ನು ನಿರ್ಮಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಇಡಬೇಕೆಂಬ ನಿರೀಕ್ಷೆಯಲ್ಲಿ ಯೋಜನೆಯನ್ನು ಮಾಡಿದ್ದೆವು ಅದರಂತೆ, ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರಿನಲ್ಲಿ ಈಗ ಇರುವ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಎರಡು ಕಡೆಯಿಂದ ಎರಡೂವರೆ ಕೋಟಿ ರೂ. ಹಣವನ್ನು ಮಂಜೂರು ಮಾಡಲಾಗಿದೆ ಎಂದರು.

2 ಕೋಟಿ ರೂ. ಹಣ ಬಿಡುಗಡೆ :

ಚಿಕ್ಕನಾಯಕನಹಳ್ಳಿ ಪೆÇಲೀಸ್ ಠಾಣೆಯ ಪಿಎಸ್‍ಐ ಹಾಗೂ ಸಿಪಿಐ ಕಚೇರಿಗಳು ಒಂದೇ ಕಡೆ ಇರಬೇಕೆಂಬ ಉದ್ದೇಶದಿಂದ ಕೆಳ ಅಂತಸ್ತಿನಲ್ಲಿ ಪಿಎಸ್‍ಐ ಕಚೇರಿ ಹಾಗೂ ಮೇಲಿನ ಅಂತಸ್ತಿನಲ್ಲಿ ಸಿಪಿಐ ಕಚೇರಿ ಸೇರಿದಂತೆ ಒಟ್ಟು 60 ಸಾವಿರ ಚದುರ ಅಡಿಯ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಅಂದಾಜು ಮಾಡಿ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದರು.

ಸಮಾರಂಭದಲ್ಲಿ ತಿಪಟೂರು ಡಿವೈಎಸ್ಪಿ ಸಿದ್ದಾರ್ಥ್ ಗೊಯಲ್, ಸಿಪಿಐ ನಿರ್ಮಲ, ಪುರಸಭಾ ಅಧ್ಯಕ್ಷೆ ಪುಷ್ಪಾ ಹನುಮಂತಯ್ಯ, ಉಪಾಧ್ಯಕ್ಷರಾದ ಪೂರ್ಣಿಮಾ, ರೇಣುಕಮ್ಮ, ಜಯಮ್ಮ, ರಾಜಮ್ಮ, ಸಿ.ಡಿ.ಸುರೇಶ್, ತಹಶೀಲ್ದಾರ್ ತೇಜಸ್ವಿನಿ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್, ಮುಖಂಡರಾದ ಮಿಲ್ಟ್ರಿ ಶಿವಣ್ಣ, ರಂಗಸ್ವಾಮಯ್ಯ, ಮೊದಲಾದವರು ಉಪಸ್ಥಿತರಿದ್ದರು.

ನಾನು ಸಚಿವನಾದ ಕಾರಣ ನಿರೀಕ್ಷೆಗೂ ಮೀರಿ ಹೆಚ್ಚಿನ ಅನುದಾನ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಬಂದಿದೆ, ನನ್ನ ಕೆಲಸವನ್ನು ಪ್ರಶಂಸಿದ ಆಗಿನ ಗೃಹ ಮಂತ್ರಿ ಈಗಿನ ಮುಖ್ಯಮಂತ್ರಿ ಎರಡು ಕಡೆ ಪೆÇಲೀಸ್ ಠಾಣೆ ನಿರ್ಮಾಣ ಮಾಡು ಎಂದು, ಅನುದಾನ ನೀಡಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

-ಜೆ.ಸಿ.ಮಾಧುಸ್ವಾಮಿ, ಸಚಿವರು

ಯಾರು ಜೈಲಿಗೆ ಹೋಗಬಾರದು :

ಮಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪುರ್‍ವಾಡ್ ಮಾತನಾಡಿ, ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರು ಠಾಣೆಗಳನ್ನು ಹೊಸದಾಗಿ ನಿರ್ಮಾಣ ಮಾಡುವ ಅಗತ್ಯತೆ ಇತ್ತು, ಸಚಿವರು ಅವರ ಅಪೇಕ್ಷೆಯಂತೆ ಎರಡು ಕಡೆ ಪೆÇಲೀಸ್ ಠಾಣೆ ನಿರ್ಮಿಸಲು ಮುಂದಾಗಿದ್ದಾರೆ.

ಅಲ್ಲದೆ ಜಿಲ್ಲೆಗೆ 5 ಪೆÇಲೀಸ್ ಠಾಣೆ ನೀಡಿದ್ದು, ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಕಟ್ಟಡ ಕಾಮಗಾರಿಗಳನ್ನು 11 ತಿಂಗಳ ಒಳಗಾಗಿ ಪೂರ್ಣಗೊಳಿಸಿ ಇದರ ಉದ್ಘಾಟನೆಯನ್ನು ಕೂಡ ಸಚಿವರೆ ಮಾಡಬೇಕೆಂಬ ಆಸೆ ನಮ್ಮಲ್ಲಿದೆ ಎಂದರಲ್ಲದೆ, ಪೆÇೀಲಿಸ್ ಠಾಣೆ ನಿರ್ಮಾಣ ಮಾಡುವುದು ಒಂದು ಪ್ರಕ್ರಿಯೆಯಷ್ಟೆ. ಆದರೆ ಜೈಲಿಗೆ ಹೋಗುವ ಅವಕಾಶ ಯಾರಿಗೂ ಬರಬಾರದು ಎಂಬುದು ನನ್ನ ಆಶಯವಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link