ಕುಡಿದ ಅಮಲಿನಲ್ಲಿ ಕೊಲೆ

ಬೆಂಗಳೂರು:

              ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡ ಮೂವರು ಯುವಕರ ಜಗಳ ವಿಕೋಪಕ್ಕೆ ತಿರುಗಿ ಓರ್ವನನ್ನು ಕೈನಿಂದ ಗುದ್ದಿ, ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಮಂಗಳವಾರ ರಾತ್ರಿ ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ತನ್ ಲೈನ್ ಮೊಹಲ್ಲಾ ಬಳಿನಡೆದಿದೆ.

             ಕಾಟನ್‍ಪೇಟೆಯ ಚಲವಾದಿ ಪಾಳ್ಯದ ರಾಕೇಶ್ (24)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ,ರಾತ್ರಿ ತನ್ ಲೈನ್ ಮೊಹಲ್ಲಾ ಬಳಿ ರಂಜಿತ್, ಮಣಿ ಜೊತೆಗೆ ಬಂದಿದ್ದ ರಾಕೇಶ್ ಮದ್ಯ ಸೇವನೆ ಮಾಡಿದ್ದಾರೆ.
ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿ ಆಕ್ರೋಶಗೊಂಡ ಮಣಿ ಹಾಗೂ ರಂಜಿತ್ ಸೇರಿ ರಾಕೇಶ್‍ಗೆ ಕೈನಿಂದ ಗುದ್ದಿ, ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಕಾಟನ್‍ಪೇಟೆ ಪೆÇಲೀಸರು ಪ್ರಕರಣ ದಾಖಲಿಸಿ ಕೊಲೆ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

              ಕೊಲೆಯಾದ ರಾಕೇಶ್ ಮಿನರಲ್ ವಾಟರ್ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ. ಕೊಲೆಗೈದವರು ಆತನ ಸ್ನೇಹಿತರೇ ಆಗಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.

ವಿವಿ ಕ್ರೀಡಾಂಗಣ ಅದ್ವಾನ

             ನಗರದ ಕೇಂದ್ರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಕ್ರೀಡಾಂಗಣ ಮದ್ಯ ಬಾಟಲಿಗಳ ರಾಶಿಗಳು, ಕಸದ ರಾಶಿಗಳಿಂದ ತುಂಬಿದ್ದು ಅದನ್ನು ತೆರವುಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ.

              ಸೆಂಟ್ರಲ್ ಕಾಲೇಜ್ ಕ್ರೀಡಾಂಗಣದಲ್ಲಿ ಮಂಗಳವಾರ ಇಂಡೋ-ನೇಪಾಳಿ ಹಬ್ಬ ಆಯೋಜನೆ ಮಾಡಲಾಗಿತ್ತು.ಹೀಗಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕ್ರೀಡಾಂಗಣವನ್ನು ಬಾಡಿಗೆಗೆ ಕೊಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಜನರು ಕುಡಿದು ಕುಣಿದು ಕುಪ್ಪಳಿಸಿ ಬಾಟಲಿಗಳನ್ನ ಕ್ರೀಡಾಂಗಣದಲ್ಲೇ ಎಸೆದು ಹಾಳು ಮಾಡಿದ್ದಾರೆ.

               ಬೇರೆ ಕಾರ್ಯಕ್ರಮಗಳಿಗೆ ಕ್ರೀಡಾಂಗಣವನ್ನ ಬಾಡಿಗೆಗೆ ನೀಡುವ ನಿಯಮವಿಲ್ಲ.ಆದರೆ ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಜಾಫೆಟ್ ಹಣಕ್ಕಾಗಿ ಕ್ರೀಡಾಂಗಣವನ್ನ ಬಾಡಿಗೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ ಕ್ರೀಡಾಂಗಣದಲ್ಲಿ ತುಂಬಿದ್ದ ಕಸ, ಬಾಟಲಿಗಳನ್ನು ತೆಗೆದು ಸ್ವಚ್ಛಗೊಳಿಸಲು ಸಿಬ್ಬಂದಿ ಬಂದಿದ್ದಾರೆ.

Recent Articles

spot_img

Related Stories

Share via
Copy link