ಲಖನೌ: 

ಕೆಲ ದಿನಗಳ ಹಿಂದೇಯಷ್ಟೇ ಅಲಹಾಬಾದ್ ಮತ್ತು ಫೈಜಾಬಾದ್ ಹೆಸರುಗಳನ್ನು ಪ್ರಯಾಗ್ ರಾಜ್, ಅಯೋಧ್ಯೆಯೆಂದು ಬದಲಾಯಿಸಿದ್ದ ಯೋಗಿ ಸರ್ಕಾರ ಈಗ ಮತ್ತೆ ತಮ್ಮ ರಾಜ್ಯದ ಹಲವು ನಗರಗಳ ಹೆಸರನ್ನೂ ಬದಲಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕ ಸಂಗೀತ್ ಸೋಮ್ ಅವರು ತಿಳಿಸಿದ್ದಾರೆ .
ಉತ್ತರಪ್ರದೇಶದಲ್ಲಿರುವ ಹಲವು ಜಿಲ್ಲೆಗಳ ಹೆಸರನ್ನು ಮೂಲ ಹೆಸರಿಗೆ ಬದಲಾಯಿಸುವಂತೆ ಜನರು ಸಾಕಷ್ಟು ವರ್ಷಗಳಿಂದ ಆಗ್ರಹಿಸುತ್ತಲೇ ಇದ್ದಾರೆ, ಹೀಗಾಗಿ ರಾಜ್ಯದಲ್ಲಿರುವ ಹಲವು ನಗರಗಳ ಹೆಸರನ್ನು ಬದಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಮುಜಾಫರ್ ನಗರವನ್ನು ಲಕ್ಷ್ಮಣ ನಗರವೆಂದು ಹೆಸರಿಡಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







