ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಬಳ್ಳಾರಿ

       ಗ್ರಾಹಕರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರಿಕೆವಹಿಸಬೇಕು, ಯಾವುದೇ ಅನಗತ್ಯ ತೊಂದರೆಗಳಲ್ಲಿ ಸಿಲುಕಬಾರದು. ಖರೀದಿಸುವ ವಸ್ತುಗಳಿಗೆ ಅನುಗುಣವಾಗಿ ವಸ್ತು ಅಥವಾ ಸೇವೆಯನ್ನು ಪಡೆಯಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಚಂಚಲಾ ಸಿ. ಎಂ ಅವರು ಹೇಳಿದರು. 

       ಜಿಲ್ಲಾಡಳಿತ, ಜಿಪಂ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಬಿಡಿಎ ಸಭಾಂಗಣದಲ್ಲಿ ಬುಧುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

          ಗ್ರಾಹಕರು ತಮ್ಮ ಸ್ವಂತ ಹಕ್ಕುಗಳಿಗೋಸ್ಕರ ಹೋರಾಡಬೇಕು. ತಾವು ಖರೀದಿಸಿದ ವಸ್ತುಗಳ ಸೇವೆಗಳಿಗೆ ವಂಚಿತರಾಗದೇ ಎಚ್ಚರಿಕೆಯಿಂದ ವಸ್ತು ಅಥವಾ ಸೇವೆಯನ್ನು ಪಡೆದು ರಸೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ಯಾವುದೇ ವಸ್ತು ದೋಷಪೂರಿತ ಇದ್ದಲ್ಲಿ ಅಥವಾ ಮಾಲೀಕರು ಪ್ರತಿಕ್ರಿಯೆ ನೀಡದಿದ್ದಲ್ಲಿ ಗ್ರಾಹಕರ ವೇದಿಕೆ ಕೇಂದ್ರಕ್ಕೆ ಪ್ರಕರಣ ದಾಖಲಿಸಿ, ದಾಖಲಿಸಿದ 90 ದಿನದೊಳಗಾಗಿ ತಮ್ಮ ಪರಿಹಾರವನ್ನು ಪಡೆಯಬಹುದಾಗಿದೆ.

         ಹಣದ ಮೌಲ್ಯವನ್ನು ತಿಳಿದುಕೊಂಡು ವಸ್ತುಗಳನ್ನು ಖರೀದಿಸಿ ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಂಕಲಯ್ಯ ಅವರು ಪ್ರಾಸ್ತಾವಿಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆನ್‍ಲೈನ್‍ನಲ್ಲಿ ಖರೀದಿ ಮಾರಾಟದ ವ್ಯವಹಾರಗಳು ಹೆಚ್ಚಾಗುತ್ತಿವೆ. ದೇಶದ ವಿವಿಧೆಡೆ ಗ್ರಾಹಕರು ಮೋಸ ಹೋಗಿರುವ ಕುರಿತು ವರದಿಯಾಗುತ್ತಿವೆ.

           ಅಪರಿಚಿತರೊಡನೆ ವ್ಯವಹರಿಸುವಾಗ ಗ್ರಾಹಕರು ಸಾಕಷ್ಟು ಎಚ್ಚರಿಕೆಯಿಂದ ವ್ಯವಹರಿಸಬೇಕು. ಗ್ರಾಹಕರಲ್ಲಿ ಜನ ಸಾಮಾನ್ಯರಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಂಘ – ಸಂಸ್ಥೆಗಳು ಪ್ರಯತ್ನಿಸಬೇಕು. ಪ್ರತಿಯೊರ್ವ ಗ್ರಾಹಕರಿಗೂ ಅವರದೇ ಆದ ಕಾನೂನಿನ ಸರಿಯಾದ ತಿಳುವಳಿಕೆ ಇಲ್ಲದ ಸಂದರ್ಭದಲ್ಲಿ ಗ್ರಾಹಕರು ಮೋಸ ಹೋಗುವ ಸಂದರ್ಭ ಎದುರಿಸಬೇಕಾಗುತ್ತದೆ. ಹಾಗಾಗಿ ವ್ಯವಹರಿಸುವ ಮುಂಚೆ ಯೋಚಿಸಿ ಸರಕುಗಳನ್ನು/ಸೇವೆಗಳನ್ನು ಹಾಗೂ ಗುಣಮಟ್ಟ ಖಾತ್ರಿಪಡಿಕೊಳಬೇಕು ಎಂದರು.

          ವಕೀಲರಾದ ಕೆ.ಸಿ.ಮಲ್ಲಿಕಾರ್ಜುನಯ್ಯ ಅವರು ಮಾತನಾಡಿ, ಯಾವುದೇ ಗ್ರಾಹಕ ತಾನು ಖರೀದಿಸಿದ ವಸ್ತುಗಳಿಗೆ ಬಿಲ್ಲ್‍ನ್ನು ಪಡೆಯಬೇಕು. ಒಂದು ವೇಳೆ ಖರೀದಿಸಿದ ವಸ್ತುವಿನಲ್ಲಿ ಲೋಪ ದೋಷ ಇದ್ದಲ್ಲಿ ಕೂಡಲೇ ದೋಷಪೂರಿತ ವಸ್ತುವಿಗೆ ಬದಲಿ ವಸ್ತುವನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ ಎಂದು ಹೇಳಿದ ಅವರು, 1991 ರಿಂದ ಈವರೆಗೆ ಜಿಲ್ಲೆಯಲ್ಲಿ ಬ್ಯಾಂಕ್, ರೈಲ್ವೆ, ವಿಮಾ, ಎಲೆಕ್ಟ್ರಿಕಲ್, ಶಿಕ್ಷಣ, ಹಾಗೂ ದಿನನಿತ್ಯದ ವಸ್ತುಗಳ ಕುರಿತು 4617 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 4521 ಪ್ರಕರಣಗಳನ್ನು ಇತ್ಯರ್ಥಪಡಿಲಾಗಿದೆ. ಉಳಿದ 96 ಪ್ರಕರಣಗಳು ಬಾಕಿ ಉಳಿದಿದೆ ಎಂದು ಅಂಕಿ-ಅಂಶ ನೀಡಿದರು.

          ಕಾರ್ಯಕ್ರಮದಲ್ಲಿ ಜಿಲ್ಲಾ ಅಂಕಿತ ಅಧಿಕಾರಿ ನಂದಾ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಅಮೃತ ಪಿ. ಚವ್ಹಾಣ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯ ಹೆಚ್. ವೀರಶೇಖರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ ಶ್ರೀಧರ್ ಸೇರಿದಂತೆ ಹಲವು ಗಣ್ಯರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link