ಶ್ರೀನಗರ: 

ಪ್ರತ್ಯೇಕತಾವಾದಿಗಳ ಬಂಧನ ಪರ್ವ ಶುರುವಾದ ಬೆನ್ನಲ್ಲೆ ಜಮ್ಮು-ಕಾಶ್ಮೀರಕ್ಕೆ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನು ಕೇಂದ್ರ ನಿಯೋಜನೆ ಮಾಡಿದೆ.
ತುರ್ತು ಅಗತ್ಯದ ಮೇಲೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಅರೆಸೇನಾಪಡೆಯ 100 ಹೆಚ್ಚುವರಿ ಪಡೆಗಳನ್ನು ಕಾಶ್ಮೀರದಲ್ಲಿ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ . ಪ್ರತ್ಯೇಕತಾವಾದಿ ಯಾಸೂನ್ ಮಲೀಕ್ ಹಾಗೂ ಇನ್ನಿತರರನ್ನು ಬಂಧಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.
ಪ್ರತ್ಯೇಕತಾವಾದಿಗಳ ಬಂಧನವನ್ನು ಸಾಮಾನ್ಯದ ಸಂಗತಿ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದರೂ ಸಹ ಹೆಚ್ಚುವರಿ ಸೇನೆಯನ್ನು ನಿಯೋಜನೆಯ ಹಿಂದೆ ಬೇರೆಯದ್ದೇ ಉದ್ದೇಶವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಇದೇ ವೇಳೆ ಪ್ರತ್ಯೇಕತಾವಾದಿ ಸಂಘಟನೆ ಜಮಾತ್ ತನ್ನ ನಾಯಕರ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಕಾಶ್ಮೀರದಲ್ಲಿ ಅಸ್ಥಿರತೆ ವಾತಾವರಣ ಉಂಟುಮಾಡಲು ಪೂರ್ವ ಯೋಜಿತ ಕೃತ್ಯ ಎಂದು ಆರೋಪ ಮಾಡಿದ್ದಾರೆ.
ಇನ್ನು ನಿನ್ನೆ ಪ್ರತ್ಯೇಕತಾವಾದಿಗಳ ಬಂಧನ ಮಾಡಿರುವುದನ್ನು ನೋಡಿದರೆ ಆರ್ಟಿಕಲ್ 35 ಎ ರದ್ದುಗೊಳಿಸುವ ಪ್ರಯತ್ನ ನಡೆದಿದೆ ಎನಿಸುತ್ತದೆ, ಇದನ್ನು ಜಮ್ಮು-ಕಾಶ್ಮೀರದ ಜನತೆ ಅದನ್ನು ಒಪ್ಪುವುದಿಲ್ಲ ಎಂದು ಜಮಾತ್ ಎಚ್ಚರಿಕೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








