ಎಂ ಜೆ ಅಕ್ಬರ್ ಪ್ರಕರಣ : ಪ್ರಿಯಾ ರಮಣಿಗೆ ಜಾಮೀನು ನೀಡಿದ ಕೋರ್ಟ್

ನವದೆಹಲಿ:
     ದೇಶದ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪ್ರಕರಣಗಳಲ್ಲಿ ಒಂದಾದ ಮಾಜಿ ಕೇಂದ್ರ ಸಚಿವ ಎಂ.ಜೆಕ್ ಅಕ್ಬರ್ ಅವರು  ಸಲ್ಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ 
     ಅಕ್ಬರ್ ಅವರು ಪತ್ರಿಕಾ ಸಂಪಾದಕರಾಗಿದ್ದ ವೇಳೆಯಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಪ್ರಿಯಾ ರಮಣಿ ಆರೋಪಿಸಿದ್ದರು ಇದಕ್ಕೆ ಪ್ರತಿಯಾಗಿ ಅಕ್ಬರ್ ರಮಣಿ ಅವರ ವಿರುಧ ಮಾನನಷ್ಟ ಮೊಕದ್ದಮೆ ಹೂಡಿದ್ದರು ಈ ಪ್ರಕರಣದಲ್ಲಿ ಪ್ರಿಯಾ ರಮಣಿಯವರಿಗೆ ಜಾಮೀನು ಸಿಕ್ಕಿದೆ  
     ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮಾರ್ ವಿಶಾಲ್ ರೂ. 10,000 ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ.
      ಪ್ರಿಯಾ ರಮಣಿ ಅವರು ಅಕ್ಬರ್ ಅವರ ವಿರುದ್ಧ ಮಾಡಿದ ಎಲ್ಲಾ ಆರೊಪಗಳನ್ನು ನಿಜ ಎಂದು ಸಾಬೀತು ಮಾಡಲು ರಮಣಿಗೆ ನ್ಯಾಯಾಲಯ ಸೂಚಿಸಿತ್ತು. ಇದೇ ವೇಳೆ ಅಕ್ಬರ್ ತಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳೆಂದು ಹೇಳಿ ಸಾರಾಸಗಟು ನಿರಾಕರಿಸಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link