ಪ್ರತಿಪಕ್ಷದವರ ಆರೋಪಗಳಿಗೆ ಮೋದಿ ನೀಡಿದ ಕಾರಣಗಳೇನು ಗೊತ್ತೇ.!?

ನವದೆಹಲಿ:

       ಈ ಹಿಂದೆಲ್ಲಾ ಸರ್ಕಾರದ ಸೌಲಭ್ಯಗಳನ್ನು ಮತ್ತು ನೆರವನ್ನು ಪಡೆಯುತ್ತಿದ್ದ ಸುಮಾರು 8 ಕೋಟಿ ನಕಲಿ ಫಲಾನುಭವಿಗಳಿದ್ದರು , ಆದರೆ ತಮ್ಮ ಸರ್ಕಾರ ಬಂದ ಮೇಲೆ ದೇಶದ ತೆರಿಗೆ ಪಾವತಿದಾರರ ಹಣವನ್ನು ಲೂಟಿ ಮಾಡುವುದನ್ನು ತಡೆದ ಕಾರಣ ವಿರೋಧ ಪಕ್ಷದ ನಾಯಕರು ನಮ್ಮನ್ನು ನಿಂದಿಸಲು ಶುರು ಮಾಡಿದ್ದಾರೆ ಎಂದು ಮೋದಿ ಕಿಡಿಕಾರಿದ್ದಾರೆ.
     ತಮ್ಮ ಸರ್ಕಾರದ ಜಾರಿಗೆ ತಂದ  ಜನ ಧನ ಯೋಜನೆ, ಆಧಾರ್ ಕಾರ್ಡ್ ಜೋಡಣೆಯಂತ ಪರಿಣಾಮಕಾರಿ ಯೋಜನೆಗಳಿಂದ ನಕಲಿ ಫಲಾನುಭವಿಗಳಿಂದ ಸರಿ ಸುಮಾರು 1,10,000 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಉಳಿತಾಯ ಮಾಡಲಾಗಿದೆ ಎಂದು ಅಂಕಿ ಅಂಶ ನೀಡಿದ್ದಾರೆ.
 
       ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿದ್ದವರನ್ನು ಎಲ್ಲಾ ರೀತಿಯಲ್ಲಿ ತಡೆದಿದ್ದರಿಂದ ಯಾರು ಕೂಡ ಸರ್ಕಾರವನ್ನು ಹಗರಣದಲ್ಲಿ ಸಿಲುಕಿಸಲು ಸಾಧ್ಯವಾಗಿಲ್ಲ. ಹಿಂದೆ ಸರ್ಕಾರದ ಅವಧಿಯಲ್ಲಿ ಸುಮಾರು 8 ಕೋಟಿ ನಕಲಿ ಫಲಾನುಭವಿಗಳು ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿದ್ದರು. ನಮ್ಮ ಸರ್ಕಾರ ಅದನ್ನು ನಿಲ್ಲಿಸಿದೆ ಎಂದು ಹೇಳಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link