ಮನೆಗಳಿಗೆ ನುಗ್ಗಿದ ಮಳೆ ನೀರು : ದವಸ-ಧಾನ್ಯ ನಾಶ

ಹುಳಿಯಾರು :

ಹುಳಿಯಾರು ಸಮೀಪದ ಅಂಕಸಂದ್ರ ಗೊಲ್ಲರಹಟ್ಟಯಲ್ಲಿ ಮಳೆ ನೀರು ಮನೆಗೆ ನುಗ್ಗಿ ಬರುತ್ತಿರುವುದು.

    ಗುರುವಾರ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ಹುಳಿಯಾರು ಸಮೀಪದ ಅಂಕಸಂದ್ರ ಗೊಲ್ಲರಹಟ್ಟಿಯ 8 ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.

     ಅಂಕಸಂದ್ರ ಗೊಲ್ಲರಹಟ್ಟಿಯ ಮನೆಗಳು ತಗ್ಗು ಪ್ರದೇಶದಲ್ಲಿರುವುದರಿಂದ ಮೇಲ್ಭಾಗದ ತೋಟ, ಹೊಲದಲ್ಲಿ ಬಿದ್ದ ಮಳೆ ನೀರು ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಆದರೆ ಗುರುವಾರ ರಾತ್ರಿ ಭಾರಿ ಮಳೆಯಾಗಿದ್ದು, ರಾತ್ರಿ 10 ಗಂಟೆಯಿಂದ ಮುಂಜಾನೆ 4 ಗಂಟೆಯವರೆವಿಗೂ ಮನೆಯಲ್ಲಿ ನೀರು ನಿಂತು ಭಾರಿ ತೊಂದರೆಯಾಗಿದೆ.

     ಶಿವಣ್ಣ, ಜಯರಾಮಯ್ಯ, ಗೋಪಾಲಯ್ಯ, ಪುಟ್ಟಲಿಂಗಯ್ಯ, ಲಕ್ಷ್ಮಯ್ಯ, ಸೋಮಶೇಖರ್, ಕಾಡಯ್ಯ, ಚಿಕ್ಕಣ್ಣ ಎಂಬುವವರ ಮನೆಗೆ ನೀರು ನುಗ್ಗಿದ್ದರಿಂದ ಅಕ್ಕಿ, ರಾಗಿ ಚೀಲ ಸೇರಿದಂತೆ ಬಟ್ಟೆ, ಹಾಸಿಗೆ, ಚಾಪೆ ಎಲ್ಲವೂ ಒದ್ದೆಯಾಗಿ ಹಾಳಾಗಿವೆ. ಅಲ್ಲದೆ ರಾತ್ರಿಯೆಲ್ಲಾ ಈ ಮನೆಯವರು ಜಾಗರಣೆ ಇರುವಂತೆ ಮಾಡಿದೆ.

     ಆದರೆ ಅದೃಷ್ಟವಶತ್ ಯಾವುದೇ ಮನೆಗಳು ಕುಸಿದಿಲ್ಲ. ಪ್ರತಿ ಮಳೆಗೂ ಈ ಸಮಸ್ಯೆ ಸಾಮಾನ್ಯ. ಹಾಗಾಗಿ ಮೇಲಿಂದ ಬರುವ ನೀರಿಗೆ ಉದಿ ಹಾಕಿ ಕಟ್ಟೆಗೆ ನೀರು ತಿರುವಿದರೆ ಈ ಸಮಸ್ಯೆಗೆ ಶಾಶ್ವಾತ ಪರಿಹಾರ ಕಲ್ಪಿಸಬಹುದಾಗಿದೆ. ಪಂಚಾಯ್ತಿಯವರು ಇತ್ತ ಗಮನ ಹರಿಸುವಂತೆ ಸ್ಥಳಿಯರು ಮನವಿ ಮಾಡಿದ್ದಾರೆ.

ಮಳೆ ವಿವರ :

     ಗುರುವಾರ ರಾತ್ರಿ ಹುಳಿಯಾರು-5.8 ಮಿಮೀ, ಶೆಟ್ಟಿಕೆರೆ 2.2 ಮಿಮೀ, ಬೋರನಕಣಿವೆ 6.8 ಮಿಮೀ, ಮತ್ತಿಘಟ್ಟ 30.9 ಮಿಮೀ, ದೊಡ್ಡಎಣ್ಣೇಗೆರೆ 10.0 ಮಿಮೀ, ಸಿಂಗದಹಳ್ಳಿ 7 ಮಿಮೀ ಮಳೆಯಾಗಿದೆ.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link