ತುಮಕೂರು
ಕುವೆಂಪು ಒಂದು ಯುಗ ಪ್ರಜ್ಞೆ ಹಾಗು ಆಧುನಿಕ ಕನ್ನಡದ ವೈಚಾರಿಕತೆಯ ಚೇತನ ಎಂದು ಸಾಹಿತಿ ಡಾ: ಕೆ .ಪಿ ನಟರಾಜ್ ರವರು ಅಭಿಪ್ರಾಯಪಟ್ಟರು ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ, ನೆಲಸಿರಿ ,ಸಿಜ್ಞಾ ಯುವಸಂವಾದ ಕೇಂದ್ರ ತುಮಕೂರು ಇವರು ಆಯೋಜಿಸಿದ್ದ ಕುವೆಂಪು ಓದು ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತ 20 ನೇ ಶತಮಾನವನ್ನು ಕುವೆಂಪು ಯುಗ ಎಂದು ಹೇಳಬಹುದು ಮೂಢನಂಬಿಕೆ ಸಂವಿಧಾನದ ಆಶಯಕ್ಕೆ ವಿರುದ್ದವಾದದು ಆದ್ದರಿಂದ ಯುವಜನಾಂಗಕ್ಕೆ ವೈಚಾರಿಕತೆಯ ಅರಿವು ಬೇಕು ಆ ಹಿನ್ನೆಲೆಯಲ್ಲಿ ಕುವೆಂಪುರವರ ವೈಚಾರಿಕ ನೆಲೆಗಟ್ಟನ್ನು ಯುವಜನರಿಗೆ ತಲುಪಿಸುವುದು ಅಭಿಯಾನದ ಉದ್ದೇಶ ಎಂದರು .
ಕುವೆಂಪುರವರ ಶೂದ್ರ ತಪಸ್ವಿ ,ಸ್ಮಶಾನ ಕುರುಕ್ಷೇತ್ರ, ಜಲಗಾರ ,ಯಮನಸೋಲು ಈ ನಾಟಕಗಳಲ್ಲಿ ಸಮಾಜಿಕ ವೈರುದ್ಯಗಳು ಹಾಗೂ ವೈಚಾರಿಕ ನೆಲೆಗಟ್ಟನ್ನು ಯುವಜನರಿಗೆ ತಿಳಿಸಿದರು.ನಂತರ ಸಿಜ್ಞಾ ಯುವ ಸಂವಾದ ಕೇಂದ್ರದ ನಿರ್ದೇಶಕ ಜ್ಞಾನ ಸಿಂಧು ಸ್ವಾಮಿ ಮಾತನಾಡಿ ಕುವೆಂಪು ರವರ ವಿಶ್ವ ಮಾನವ ತತ್ವದಲ್ಲಿ ಯುವಜನಾಂಗ ಸಾಗಬೇಕು ಮನುಷ್ಯ ಮತ್ತೊಬ್ಬರನ್ನು ಗೌರವಿಸುವುದು ಪ್ರೀತಿಸುವುದನ್ನು ಕಲಿಯಬೇಕು ಮತ್ತು ಮತೀಯ ಧೋರಣೆಗಳನ್ನು ಮೆಟ್ಟಿ ನಿಲ್ಲಬೇಕೆಂದರು .
ಧರ್ಮ ,ಜಾತಿ ,ಲಿಂಗ ತಾರತಮ್ಯ ಮಾಡದೇ ಬಹುತ್ವದ ನೆಲಗಟ್ಟಿನಿಂದ ಯೋಚಿಸಬೇಕು ಹಾಗೂ ಯುವಜನರು ಯಾವುದೇ ಪಕ್ಷದ ಗುಲಾಮಗಿರಿಗೆ ಒಳಪಡದೇ ಎಲ್ಲರನ್ನೂ ಪ್ರಶ್ನಿಸಬೇಕು ಎಂದರು. ಜಗತ್ತಿನಲ್ಲಿ ಯಾವುದು ಶ್ರೇಷ್ಠವೂ ಅಲ್ಲ ಕನಿಷ್ಠವೂ ಅಲ್ಲ ಎಲ್ಲರನ್ನೂ ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು ಮತ ಗುಂಪುಕಟ್ಟುವ ವಿಷಯವಾಗಬಾರದು .ಯಾರು ಯಾವ ಮತಕ್ಕೂ ಸೇರದೆ ವಿಶ್ವ ಮಾನವ ತತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು,
ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೆ .ಎಸ್ .ಜಗದೀಶ್ ಮಾತನಾಡಿ ರಾಮಮನೋಹರ ಲೋಹಿಯ ಕುವೆಂಪು ರವರು ನಾಡು ಕಂಡ ಶ್ರೇಷ್ಠ ವಿಚಾರವಂತರು ಕುವೆಂಪು ಮನುಷ್ಯನೆಲೆಗೆ ಆದ್ಯತೆ ಕೊಟ್ಟ ವಿಚಾರವಾದಿ ಹಾಗು ಗುಲಾಮಗಿರಿಗೆ ಮೌಡ್ಯತೆಗೆ ವಿರೋಧಿಯಾಗಿದ್ದರು ಆದ್ದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕಕ್ಕೆ ಸೀಮಿತವಾಗದೆ ವೈಚಾರಿಕತೆಯ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪಾದಿಸಬೇಕು ಮತ್ತು ಇಂದಿನ ಶಿಕ್ಷಣ ಇದಕ್ಕೆ ಪೂರಕವಾಗಿರಬೇಕು ಶತಮಾನದಿಂದ ಇರುವ ಸಮಸ್ಯೆಯನ್ನು ಅನುಸಂಧಾನದ ಮೂಲಕ ಬಗೆಹರಿಸಬೇಕು ಎಂದರು .
ನಂತರ ಯುವಜನರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಶಿವಲಿಂಗಮೂರ್ತಿ ರವರು ಹಾಗು ಉಪನ್ಯಾಸಕರಾದ ಅಜಿತ್, ರಾಘವೇಂದ್ರ ,ಕೃಷ್ಣನಾಯ್ಕ್ , ಚಂದ್ರಕಾಂತ ಸ್ವಾಮಿ ಮತ್ತು ಕಾವ್ಯಶ್ರೀ ಬೆಟ್ಟದಬಯಲು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








