ವಿಶ್ವಸಂಸ್ಥೆ
ಮಾಲಿಯಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಪ್ರತಿಕ್ರಿಯೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್ರಸ್ ಅಭಿಪ್ರಾಯಪಟ್ಟಿದ್ದಾರೆ.
ಮಾಲಿ ಪರಿಸ್ಥಿತಿಯ ಬಗ್ಗೆ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ಅವರು, ಭಯೋತ್ಪಾದಕ ಗುಂಪುಗಳು ಮತ್ತು ಉಗ್ರರ ತಂಡ ಭೂ ಪ್ರದೇಶಗಳನ್ನು ಜಯಿಸುತ್ತಿದೆ. ಅವರು ಈ ಪ್ರಾಂತ್ಯದಲ್ಲಿ ಹೆಚ್ಚು ಕ್ರಿಯಾಶೀಲರಾಗುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿದರು.
ಭೂಮಿ ಮತ್ತು ನೀರಿನ ಮೇಲೆ ಸ್ವಾಧೀನ ಹೊಂದಲು ಜನಾಂಗೀಯ ಗುಂಪುಗಳ ನಡುವಿನ ಆಂತರಿಕ ಕೋಮು ಸಂಘರ್ಷ ಉಲ್ಬಣಗೊಳ್ಳುವ ಉಗ್ರವಾದದ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ. ಸಣ್ಣ ಮತ್ತು ಲಘು ಶಸ್ತ್ರಾಸ್ತ್ರಗಳ ಪ್ರಸರಣ, ಸ್ವಯಂ ರಕ್ಷಣೆಯ ಹೆಸರಿನಲ್ಲಿ ಜನಾಂಗೀಯ ಗುಂಪುಗಳು ಶಸ್ತ್ರಾಸ್ತ್ರ ಹೊಂದುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.
2018ರಲ್ಲಿ ಮಾಲಿಯಲ್ಲಿ ನಾಗರಿಕರು, ಸರ್ಕಾರಿ ಅಧಿಕಾರಿಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಡೆಗಳ ಸದಸ್ಯರ ಮೇಲೆ 240ಕ್ಕೂ ಅಧಿಕ ದಾಳಿಗಳು ನಡೆದಿವೆ. 2016ರಲ್ಲಿ 183 ದಾಳಿಗಳು ನಡೆದಿದ್ದವು ಎಂದು ವಿಶ್ವಸಂಸ್ಥೆ ತಿಳಿಸಿದೆ.
ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಒಂದು ವರ್ಷದ ಹಿಂದೆ 40 ಸಾವಿರ ಜನರು ನಿರಾಶ್ರಿತರಾಗಿದ್ದರು. ಈಗ ಇದು ಫೆಬ್ರವರಿ ತಿಂಗಳಿಗೆ 1,23,000ಕ್ಕೆ ಏರಿಕೆಯಾಗಿದೆ. 2017ರಲ್ಲಿ ಸುಧಾರಿತ ಸ್ಫೋಟಕ ಸಾಧನ ಬಳಕೆ 29 ಇದ್ದರೆ, 2018ರಲ್ಲಿ 100 ದಾಳಿದೆ ಎಂದು ವಿಶ್ವಸಂಸ್ಥೆಯ ಅಂಕಿಅಂಶಗಳು ಹೇಳುತ್ತವೆ.ಕಳೆದ 18 ತಿಂಗಳಲ್ಲಿ ಚಾಡ್, ಗಿನಿಯಾ ಮತ್ತು ಶ್ರೀಲಂಕಾದ 18 ಮಂದಿ ಶಾಂತಿಪಾಲಕರು ಮಾಲಿಯಲ್ಲಿ ನಡೆದ ದಾಳಿಗೆ ಬಲಿಯಾಗಿದ್ದಾರೆ.
ಮಾಲಿಯಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆಯ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಮಾಲಿಯನ್ ಮತ್ತು ಅಂತಾರಾಷ್ಟ್ರೀಯ ಪಡೆಗಳು ಸೂಕ್ತ ರೀತಿಯ ಪ್ರತಿಕ್ರಿಯೆ ನೀಡಬೇಕು ಎಂದು ಗುಟೆರ್ರೆಸ್ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








