ಯುವಕನನ್ನು ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ…!!!

ಬೆಂಗಳೂರು

       ಕಳ್ಳತನ, ಸುಲಿಗೆ, ಕೊಲೆಯತ್ನ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಯುವಕನನ್ನು ಅಡ್ಡಗಟ್ಟಿದ ಐದಾರು ಮಂದಿ ದುಷ್ಕರ್ಮಿಗಳು ಮಚ್ಚು-ಲಾಂಗ್‍ಗಳಿಂದ ಮಚ್ಚು ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ದುರ್ಘಟನೆ ಜೆಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

       ಜೆಸಿನಗರದ ರಾಮಕೃಷ್ಣ ಬ್ಲಾಕ್ ಪಿಜಿ ರಸ್ತೆಯ ವಿಘ್ನೇಶ್ ಅಲಿಯಾಸ್ ವಿನಾಯಕ(20)ಎಂದು ಕೊಲೆಯಾದ ಅಪರಾಧ ಹಿನ್ನಲೆಯುಳ್ಳ ಆರೋಪಿಯನ್ನು ಗುರುತಿಸಲಾಗಿದೆ.

         ತಮಿಳುನಾಡು ಮೂಲದ ಆರೋಪಿಯು ಪಿಜಿ ರಸ್ತೆಯ ಮನೆಗೆ ರಾತ್ರಿ 1ರ ವೇಳೆ ವಿಘ್ನೇಶ್ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಮಚ್ಚು ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿದ್ದು ಕೃತ್ಯ ನೋಡಿದ ಸ್ನೇಹಿತ ಪರಾರಿಯಾಗಿದ್ದಾನೆ.

        ಮೊಬೈಲ್ ಕಳ್ಳತನ, ಸುಲಿಗೆ ಹಾಗೂ ಕೊಲೆಯತ್ನ ಸೇರಿ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಘ್ನೇಶ್ ಕಳೆದ ಮೂರು ವರ್ಷಗಳಿಂದ ಅಪರಾದ ಕೃತ್ಯದಲ್ಲಿ ತೊಡಗಿದ್ದನು ಕಳವು ಪ್ರಕರಣವೊಂದರಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ವಿಘ್ನೇಶ್ ಬಂಧಿಸಿ ಜೈಲಿಗೆ ಕಳುಹಿಸಿದ್ದರು.

       ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಅಪರಾಧ ಕೃತ್ಯಗಳ ದ್ವೇಷದ ಹಿನ್ನಲೆಯಲ್ಲಿ ಆತನನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ

       ಕೊಲೆ ನಡೆದ ಸ್ಥಳಕ್ಕೆ ಧಾವಿಸಿರುವ ಜೆಸಿ ನಗರ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link