ಬೆಂಗಳೂರು
ಹೆಬ್ಬಾಳದಲ್ಲಿ ಮಾರುವೇಷದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಉತ್ತರ ವಿಭಾಗದ ಪೊಲೀಸರು ಶನಿವಾರ ನಂದಿನಿಲೇಔಟ್‍ನಲ್ಲಿ ರಾತ್ರಿಯಿಡಿ ಕಾರ್ಯಾಚರಣೆ ಕೈಗೊಂಡು ಬೀದಿ ಕಾಮಣ್ಣರು,ಜಂಕ್ಷನ್‍ಗಳು ರಸ್ತೆ ಕಾರ್ನರ್‍ಗಳಲ್ಲಿ ಮದ್ಯಪಾನ ಮಾಡಿ ಗುಂಪಾಗಿ ಸೇರುವುದು ದಾರಿ ಹೋಕರಿಕೆ ಬೆದರಿಕೆ ಹಾಕುವುದು, ದೌರ್ಜನ್ಯ ನಡೆಸುತ್ತಿದ್ದ 12 ಮಂದಿ ರೌಡಿಗಳು ಸೇರಿ 340 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ನಂದಿನಿ ಲೇಔಟ್ ಸುತ್ತಮುತ್ತಲ ಪ್ರದೇಶಗಳಲ್ಲಿ ಜಂಕ್ಷನ್‍ಗಳು,ಆಟೋ,ಬಸ್ ನಿಲ್ದಾಣಗಳು, ರಸ್ತೆ ಕಾರ್ನರ್‍ಗಳಲ್ಲಿ ಗುಂಪಾಗಿ ಸೇರುವುದು ಮಧ್ಯರಾತ್ರಿವರೆಗೆ ಸ್ಥಳೀಯರಿಗೆ ದಾರಿ ಹೋಕರಿಗೆ ಕಿರಿಕಿರಿ ಉಂಟುಮಾಡುತ್ತಿರುವ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಡಿಸಿಪಿ ಶಶಿಕುಮಾರ್ ಅವರು ಎಸಿಪಿ ಇನ್ಸ್‍ಪೆಕ್ಟರ್‍ಗಳು ಸೇರಿ 40ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯೊಂದಿಗೆ ಮಾರುವೇಷದ ಕಾರ್ಯಾಚರಣೆ ಕೈಗೊಂಡರು.
ನಂದಿನಿ ಲೇಔಟ್‍ನ ಪೊಲೀಸ್ ಠಾಣೆಯ ಬಳಿಯಿಂದ ರಾತ್ರಿ9 ರಿಂದ ಆರಂಭಗೊಂಡ ವಿಶೇಷ ಕಾರ್ಯಾಚರಣೆಯು ಮಧ್ಯರಾತ್ರಿ 2 ರವರೆಗೆ ಬೈಕ್ ಜೀಪುಗಳಲ್ಲಿ ಮಾರು ವೇಷದಲ್ಲಿ ಗಲ್ಲಿಗಳು,ಜಂಕ್ಷನ್‍ಗಳು,ಆಟೋ,ಬಸ್ ನಿಲ್ದಾಣಗಳು, ರಸ್ತೆ ಕಾರ್ನರ್‍ಗಳಲ್ಲಿ ಸಂಚರಿಸಿ ಕಿರಿಕಿರಿ ಉಂಟು ಮಾಡುವ ದೌರ್ಜನ್ಯ ನಡೆಸುವ ಬೆದರಿಕೆ ಹಾಕುವವರು ಒಳಗೊಂಡು 12 ಮಂದಿ ರೌಡಿಗಳು 8 ಮಂದಿ ಹಳೆ ಆರೋಪಿಗಳು ಸೇರಿ 340 ಮಂದಿಯನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ವಿಚಾರಣೆಯಲ್ಲಿ ಯುವಕರ ವಿಳಾಸ, ಮೊಬೈಲ್ ಸಂಖ್ಯೆ ಮಾಡುತ್ತಿರುವ ಉದ್ಯೋಗದ ಮಾಹಿತಿ ಪಡೆದುಕೊಂಡು ಪೋಷಕರನ್ನು ಕರೆಯಿಸಿ ಅವರ ಮುಂದೆಯೇ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.ವಶಕ್ಕೆ ಪಡೆದುಕೊಂಡವರಲ್ಲಿ ಅಪರಾಧ ಕೃತ್ಯದಲ್ಲಿ ತೂಡಗಿರುವವರು ಪತ್ತೆಯಾಗಿದ್ದು ಅವರಿಗೆ ಕಠಿಣ ರೀತಿಯಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








