ಗ್ರಾ,ಪಂ ಗಳಿಗೆ ಹೊಸ ಅಪ್ ಡೇಟ್..!!!

ಮಂಗಳೂರು:

      ಗ್ರಾಮಗಳ ಅಭಿವೃದ್ಧಿಗಾಗಿ ನಡೆಸುವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಇನ್ನು ಪರಿಣಾಮಕಾರಿಯಾಗಿಸಲು  ಗ್ರಾ.ಪಂ.ಗಳು ಸಾಮಾಜಿಕ ಜಾಲತಾಣದತ್ತ ಮುಖ ಮಾಡಿವೆ. ರಾಜ್ಯದ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ 200 ಸದಸ್ಯರಿರುವ ವಾಟ್ಸ್‌ಆ್ಯಪ್‌ ಗುಂಪುಗಳನ್ನು ರಚಿಸುವಂತೆ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಗ್ರಾ.ಪಂ. ಪಿಡಿಒಗಳಿಗೆ ನಿರ್ದೇಶನ ನೀಡಿದೆ.

      ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ತಿಂಗಳಿನಿಂದ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನ ವಾಟ್ಸ್‌ಆ್ಯಪ್‌ ಗುಂಪುಗಳು ರಚನೆಯಾಗಲಿದ್ದು, ಸರಕಾರದ ಗ್ರಾಮೀಣಾಭಿವೃದ್ಧಿ ಮಾಹಿತಿ ಆಯಾ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ಮೊಬೈಲ್‌ನಲ್ಲೇ ತಿಳಿದುಬರಲಿದೆ. ಆಯಾ ಗ್ರಾ.ಪಂ.ನಲ್ಲಿ ಆರಂಭವಾಗಲಿರುವ  ವಾಟ್ಸ್‌ಆ್ಯಪ್‌ ಗುಂಪಿಗೆ ಅಲ್ಲಿನ ಪಿಡಿಒ ಅಡ್ಮಿನ್‌.

     ಪಂಚಾಯತ್‌ರಾಜ್‌ ಸಂಸ್ಥೆಗಳ ಚುನಾಯಿತ ಸದಸ್ಯರು, ಇಲಾಖಾಧಿಕಾರಿಗಳು, ಗ್ರಾ.ಪಂ. ಸಿಬಂದಿ ವರ್ಗ ಮತ್ತು ಇತರ ಭಾಗೀದಾರರಿಗೆ ಇಲಾಖೆಯ ಮಾಹಿತಿ ಬಿತ್ತರಿಸುವುದು ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಆವಶ್ಯವಿದ್ದರೆ ಸೂಕ್ತ ಬದಲಾವಣೆ ತರುವುದಕ್ಕಾಗಿ ವಾಟ್ಸ್‌ಆ್ಯಪ್‌ ಗುಂಪು ರಚನೆ ಸರಕಾರದ ಉದ್ದೇಶ.

     ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಆರ್‌ಡಿಪಿಆರ್‌ ಗ್ರಾಮವಾಣಿಯ ಮೊಬೈಲ್‌ ಸಂಖ್ಯೆಗೆ ಮೇ 31ರ ಒಳಗೆ ರಾಜ್ಯದ ಎಲ್ಲ ಪಿಡಿಒಗಳು ತಮ್ಮ ಹೆಸರು, ಹುದ್ದೆ, ಗ್ರಾ.ಪಂ., ತಾಲೂಕು, ಜಿಲ್ಲೆಯ ವಿವರಗಳನ್ನು ಮೆಸೇಜ್‌ ಮಾಡಬೇಕಿದೆ. ಇದು ಸ್ವೀಕೃತಿ ಆದ ಬಳಿಕ ಗ್ರಾಮವಾಣಿಯ ಪಟ್ಟಿಯಲ್ಲಿ ಸಂಬಂಧಿತ ಪಿಡಿಒಗಳು ಸೇರಲಿದ್ದಾರೆ. ಬಳಿಕ ಪ್ರತೀ ದಿನ ಗ್ರಾಮೀಣಾಭಿವೃದ್ಧಿ ಯೋಜನೆ, ಸ್ವತ್ಛತೆ, ಕುಡಿಯುವ ನೀರು ಸೇರಿದಂತೆ ವಿವಿಧ ಕಾರ್ಯಕ್ರಮ, ಚಟುವಟಿಕೆಗಳ ಬಗ್ಗೆ ಮಾಹಿತಿ, ಅಪ್‌ಡೇಟ್‌ಗಳನ್ನು ಪಿಡಿಒಗಳು ಪಡೆಯಲಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link