ವಿಮಾನ ನಿಲ್ದಾಣದ ಗೋಡೆಗೆ ಬಡಿದ ವಿಮಾನ : ಪ್ರಯಾಣಿಕರು ಸೇಫ್..!

0
39

ಚೆನ್ನೈ:

      133 ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಇಂದು ಶುಕ್ರವಾರ ಇಲ್ಲಿನ ವಿಮಾನ ನಿಲ್ದಾಣದ ಗೋಡೆಯನ್ನು  ವಿಮಾನ ನಿಲ್ದಾಣದ ಕಾಂಪೌಂಡ್ ಗೆ ಬಡಿದ ಆತಂಕಕಾರಿ ಘಟನೆ ನಡೆದಿದೆ.  

      ತಮಿಳುನಾಡಿನ ತಿರುಚಿಯಿಂದ ದುಬೈಗೆ ತೆರಳಬೇಕಿದ್ದ ವಿಮಾನ ಟೇಕಾಫ್ ಆಗುತ್ತಿದ್ದ ಸಮಯದಲ್ಲಿ ವಿಮಾನ ನಿಲ್ದಾಣದ ಕಾಂಪೌಂಡ್ ಗೋಡೆಗೆ ಆಕಸ್ಮಿಕವಾಗಿ ಡಿಕ್ಕಿಹೊಡೆದಿದೆ. ವಿಮಾನದ ಸಣ್ಣ ಚಕ್ರಗಳು ಗೋಡೆಗೆ ಬಡಿದಿದ್ದರಿಂದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.ಬೆಳಗ್ಗಿನ ಜಾವ 1.20 ರ ಸಮಯದಲ್ಲಿ ಈ ಘಟನೆ ನಡೆದಿದೆ.

ಘಟನೆಗೆ ಕಾರಣ:

      ವಾಯ ಸಾರಿಗೆ ನಿಯಂತ್ರಣ ಕೊಠಡಿಯ ಅಧಿಕಾರಿಗಳೊಂದಿಗಿನ ಸಂಪರ್ಕ ಕಳೆದುಕೊಂಡಿದ್ದ ವಿಮಾನವು ಅನಂತರ ಸುಮಾರು ನಾಲ್ಕು ತಾಸುಗಳ ಬಳಿಕ ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತೇ ಅಥವಾ ಪೈಲಟ್‌ ಎಸಗಿದ ತಪ್ಪಿನಿಂದಾಗಿ ಈ ಘಟನೆ ನಡೆಯಿತೇ ಎಂಬುದು ಗೊತ್ತಾಗಿಲ್ಲ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

      ಘಟನೆಯ ನಂತರ ವಿಮಾನವನ್ನು ಮುಂಬೈನಲ್ಲಿ ಇಳಿಸಿ, ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಯಿತು.  ವಿಮಾನದಲ್ಲಿದ್ದ ಎಲ್ಲ 133 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 
  

LEAVE A REPLY

Please enter your comment!
Please enter your name here