ಬೆಂಗಳೂರು :
ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಗೃಹಜ್ಯೋತಿ ಯೋಜನೆಯಡಿ ನಿಗದಿತ ಯುನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದವರಿಗೆ ಈಗ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿದೆ.ರಾಜ್ಯ ಸರ್ಕಾರವು ಉಚಿತ ವಿದ್ಯುತ್ ಜೊತೆಗೆ 10 ಯೂನಿಟ್ ಹೆಚ್ಚುವರಿ ಉಚಿತ ವಿದ್ಯುತ್ ಬಳಸಿದ ಗ್ರಾಹಕರೂ ಎಎಸ್ ಡಿ ಪಾವತಿಸುವುದು ಕಡ್ಡಾಯವಾಗಿದೆ.ಈ ಮೂಲಕ ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಿದೆ.
ವಿದ್ಯುತ್ ಸಂಪರ್ಕ ಪಡೆದ ಗ್ರಾಮ ೧೨ ತಿಂಗಳಲ್ಲಿ ಬಳಸಿದ ಸರಾಸರಿ ವಿದ್ಯುತ್ ಪ್ರಮಾಣ ಲೆಕ್ಕ ಹಾಕಿ ಅದರಲ್ಲಿ ಎರಡು ತಿಂಗಳ ಬಿಲ್ ಮೊತ್ತವನ್ನು ವಿದ್ಯುತ್ ಸರಬರಾಜು ಕಂಪನಿಗಳು ಭದ್ರತಾ ಠೇವಣಿ ಪಡೆದುಕೊಳ್ಳಲಿವೆ. ಇದರ ಮೇಲೆ ಪ್ರತಿ ತಿಂಗಳ ಹೆಚ್ಚುವರಿಯಾಗಿ 10 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಬಳಸಲು ಅವಕಾಶವಿದೆ. ಈ ಫಲಾನುಭವಿಗಳು ಹಿಂದಿನ ತಿಂಗಳ ಬಳಕೆಗಿಂತ 10 ಯೂನಿಟ್ ಅಧಿಕ ಬಳಕೆ ಮಾಡಬಹುದು. ಅದಕ್ಕಿಂತ ಹೆಚ್ಚು ಬಳಸಿದರೆ, ಹೆಚ್ಚುವರಿ ಯೂನಿಟ್‌ಗಳ ಬಿಲ್ ಪಾವತಿ ಮಾಡಬೇಕು.