ಬೆಂಗಳೂರು:
ಹಿಜಾಬ್ ವಿವಾದ ಶುರುವಾಗಿದ್ದೇ ಆಗಿದ್ದು ರಾಜ್ಯದಲ್ಲಿ ದಿನಕ್ಕೊಂದು ಧರ್ಮ ಸಂಘರ್ಷಗಳು ಕಿಚ್ಚು ಹಚ್ಚಿಸ್ತಿವೆ. ಹಲಾಲ್ ವರ್ಸಸ್ ಜಟ್ಕಾ ವಿವಾದ ತಹಬದಿಗೆ ಬಂತು ಅನ್ನೋವಾಗಲೇ ಈಗ ಲೌಡ್ ಸ್ಪೀಕರ್ ವಿವಾದ ಲೌಡ್ ಆಗಿದೆ. ಇದಕ್ಕೆ ಪೊಲೀಸರು ಕೂಡ ಎಂಟ್ರಿ ಕೊಟ್ಟಿದ್ದಾರೆ.
ಹಿಜಾಬ್ ಗದ್ದಲ, ವ್ಯಾಪಾರ ಸಮರ, ಹಲಾಲ್ ದಂಗಲ್.. ಈ ಎಲ್ಲಾ ಸದ್ದು ಗದ್ದಲ ಇನ್ನೂ ಕಿಚ್ಚು ಹಚ್ಚಿಸಿರುವಾಗಲೇ ಈಗ ಲೌಡ್ಸ್ಪೀಕರ್ ವಿರುದ್ಧ ಅಭಿಯಾನ ಶುರುವಾಗಿದೆ. ಮಸೀದಿ ಹಾಗೂ ಇನ್ನೀತರ ಧಾರ್ಮಿಕ ಸಂಸ್ಥೆಗಳಲ್ಲಿ ಮೈಕ್ ಹಾಕುವುದರಿಂದ ಶಬ್ದಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಇವುಗಳನ್ನ ಬ್ಯಾನ್ ಮಾಡಬೇಕೆಂದು ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೇ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಯುವಕನ ಕೊಲೆ: ಶಾಹಿದ್ ಹೆಸರಿನ ಮೂವರು ಆರೋಪಿಗಳು ಪೊಲೀಸರ ವಶಕ್ಕೆ!
ಬೆಂಗಳೂರಿನ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ನೋಟಿಸ್ಮೈಕ್ ವಿಚಾರವಾಗಿ ಬೆಂಗಳೂರು ಪೊಲೀಸ್ ಇಲಾಖೆಯಿಂದ ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್ ನೀಡಿದ್ದಾರೆ.ಧಾರ್ಮಿಕ ಕೇಂದ್ರಗಳಿಗೆ ನೋಟಿಸ್
ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಶಬ್ದಮಾಲಿನ್ಯ ಗೈಡ್ ಲೈನ್ಸ್ ಪಾಲಿಸುವಂತೆ ನೋಡಿಕೊಳ್ಳಲು ಸೂಚಿಸಿತ್ತು. ಈ ಹಿನ್ನೆಲೆ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ 2000 ನಿಯಮ ಪಾಲಿಸದ ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇಲ್ಲಿವರೆಗೂ 301 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ನೀಡಲಾಗಿದ್ದು ಈ ಪೈಕಿ 125 ಮಸೀದಿ, 83 ದೇವಸ್ಥಾನ, 22 ಚರ್ಚ್‌ಗಳಿವೆ. ಹೈ ಡೆಸಿಬಲ್ಸ್ ಲೌಡ್ ಸ್ಪೀಕರ್ ಬಳಸುವ ಧಾರ್ಮಿಕ ಕೇಂದ್ರಗಳಿಗೆ ಈ ನೋಟಿಸ್ ನೀಡಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಹೈಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ತಿದ್ದೇವೆ. ನಗರದ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ನೋಟಿಸ್ ನೀಡೋ ಮೂಲಕ ಧ್ವನಿವರ್ಧಕ ಹೇಗೆ ಬಳಸಬೇಕು ಎಂಬುದನ್ನ ತಿಳಿಸಿಕೊಡ್ತಿದ್ದೇವೆ ಅಂತ ಹೇಳಿದ್ದಾರೆ.
ಒಟ್ಟಾರೆ ಹಿಜಾಬ್ ವಿವಾದ ಶುರುವಾದ ಬೆನ್ನಲ್ಲೇ ಒಂದಿಲ್ಲೊಂದು ವಿವಾದಗಳು ಕಿಡಿಯಂತೆ ಹೊತ್ತಿಕೊಳ್ತಿವೆ. ಸದ್ಯ ಲೌಡ್ ಸ್ಪೀಕರ್ ಅಭಿಯಾನ ನಗರದಲ್ಲಿ ಲೌಡಾಗಿ ಕೇಳಿ ಬರ್ತಿದ್ದು ಇದನ್ನ ಹಿಂದೂ ಸಂಘಟನೆಗಳು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿವೆ. ಈ ಬಗ್ಗೆ ಸರ್ಕಾರ ಎಲ್ಲರ ಹಿತದೃಷ್ಟಿಯನ್ನ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕಿದೆ.
ಮದ್ಯ ಪ್ರಿಯರಿಗೆ ಬಿಗ್ ಶಾಕ್ : ರಾಜ್ಯದ ಬಾರ್ ಆಯಂಡ್ ರೆಸ್ಟೋರೆಂಟ್ ಗಳಲ್ಲಿ ನೋ ಸ್ಟಾಕ್, ಇಂದೂ ಸಿಗೋಲ್ಲ ಎಣ್ಣೆ!
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ