ಟೋಕಿಯೋ
ಜಪಾನ್ ನಲ್ಲಿ ಚಂಡಮಾರುತ ಟಪಾಹ್ ಬೀಸಲಿದ್ದು ವಿಮಾನಯಾನ ಸಂಸ್ಥೆ ದೇಶದ ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ವಿಮಾನ ಸೇವೆಯನ್ನು ರದ್ದುಪಡಿಸಿದೆ. ಈ ಪ್ರಬಲ ಗಾಳಿಯಿಂದಾಗಿ ಈಗಾಗಲೇ ಸುಮಾರು 33 ಸಾವಿರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಒಖಿನೋವಾ ಪ್ರಾಂತ್ಯದ ದಕ್ಷಿಣದಲ್ಲಿ ತಪಾಹ್ ಚಂಡಮಾರುತ ಕೇಂದ್ರೀಕೃತವಾಗಿದ್ದು ಜಪಾನ್ ಮತ್ತು ಕೊರಿಯಾ ದ್ವೀಪದ ಪಶ್ಚಿಮ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ.ಈ ಚಂಡಮಾರುತ ಗಂಟೆಗೆ 78 ಮೈಲು ವೇಗದಲ್ಲಿ ಬೀಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








