ಮುಖಗವಸು ಧರಿದುವುದು ಕಡ್ಡಾಯವಲ್ಲ: ಟ್ರಂಪ್

ವಾಷಿಂಗ್ಟನ್:

     ಕೊರೋನಾ ವೈರಸ್ ಹಬ್ಬುವುದನ್ನು ತಡೆಯಲು  ಜನರು ಕಡ್ಡಾಯವಾಗಿ ಮುಖ ಗವುಸು ಧರಿಸಬೇಕೆಂದು ವಿಶ್ವ ನಾಯಕರು ಒಂದೆಡೆ ಕರೆ ನೀಡುತ್ತಿದ್ದರೆ, ಟ್ರಂಪ್ ಮಾತ್ರ  ತದ್ವಿರುದ್ದವಾಗಿ  ಮುಖಗವಸು  ಧರಿಸುವಂತೆ ಜನರಿಗೆ ಆದೇಶಿಸುವುದಿಲ್ಲ, ಅದನ್ನು ಅವರ ಸ್ವಾತಂತ್ರಕ್ಕೆ ಬಿಟ್ಟುಬಿಡಬೇಕೆಂದು ಹೇಳಿದ್ದಾರೆ. 

      ಅಮೆರಿಕಾದ  ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಆಂಥೋನಿ ಫಾಸಿ  ಮಾತ್ರ ಹೆಚ್ಚಿನ ಜನ ಸಮೂಹ ಜಮಾಯಿಸುವ  ಸ್ಥಳಗಳಲ್ಲಿ ಮುಖಗವುಸು ಧರಿಸುವ ಅಗತ್ಯವನ್ನು ರಾಜಕೀಯ ನಾಯಕರು ಜನರಿಗೆ  ಮನದಟ್ಟು ಮಾಡಿಕೊಡಬೇಕೆಂದು  ಕರೆ ನೀಡಿದ್ದಾರೆ.

       ಟ್ರಂಪ್ ಅವರು ಮಾಧ್ಯಮವೊಂದಕ್ಕೆ ನೀಡಿದ  ಸಂದರ್ಶನದಲ್ಲಿ ,ಜನರು ಮಾಸ್ಕ್  ಧರಿಸಬೇಕೆಂಬ ನಿಬಂಧನೆಗೆ  ತಾವು   ವಿರುದ್ದವಾಗಿರುವುದಾಗಿ  ಎಂದು  ಅಭಿಪ್ರಾಯ ವ್ಯಕ್ತಪಡಿಸಿದ್ದರು.ಮಾಸ್ಕ್  ಧರಿಸುವುದರಿಂದ ಸಂಪೂರ್ಣವಾಗಿ ವೈರಸ್ ನಿಯಂತ್ರಿಸಲು ಸಾಧ್ಯವಿಲ್ಲ ಎಂದು  ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಎಂದಿಗೂ  ಮುಖಗವುಸು ಧರಿಸದ ಟ್ರಂಪ್, ಇತ್ತೀಚೆಗೆ ಒಮ್ಮೆ ಮುಖವಾಡ ಧರಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು.   

       ಅಗತ್ಯವಿದ್ದಾಗ ಮುಖವಾಡ ಧರಿಸುವುದು ದೊಡ್ಡ ಸಮಸ್ಯೆಯಲ್ಲ, ಆದರೆ ಸಾಮಾಜಿಕ ಅಂತರ ಪಾಲಿಸುವುದು ಸ್ವಲ್ಪ  ಸಮಸ್ಯೆ 
ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಪ್ರಸ್ತುತ  ದೇಶದಲ್ಲಿ ಆರ್ಥಿಕ ವ್ಯವಸ್ಥೆ  ಮತ್ತೆ  ಚೇತರಿಸಿಕೊಳ್ಳುತ್ತಿರುವ  ಹಿನ್ನಲೆಯಲ್ಲಿ 
ಭಾರಿ ಜನ ಸಮೂಹ  ಸೇರುವ ಸಾಧ್ಯತೆಯಿದೆ. ಹಾಗಾಗಿ  ಜನರು ಅಗತ್ಯವಾಗಿರುವ  ಮುಖ ಗವುಸು  ಧರಿಸಬೇಕೆಂದು  ಟ್ರಂಪ್  
ಜನರಿಗೆ ಸೂಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link