ಬಜೆಟ್-2019 : ‘ಬ್ರೀಫ್ ಕೇಸ್’ ಸಂಪ್ರದಾಯ ಮುರಿದ ಸೀತಾರಾಮನ್!!!

ನವದೆಹಲಿ:

      ಬಹು ನಿರೀಕ್ಷಿತ 2019-20 ನೇ ಸಾಲಿನ ಬಜೆಟ್‌ ಮಂಡಿಸಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

      ಹೌದು, ಬಜೆಟ್ ದಾಖಲೆಗಳನ್ನು ಸೂಟ್ ಕೇಸ್ ಬದಲು ಕೆಂಪು ವಸ್ತ್ರದಲ್ಲಿ ತರುವ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ರವರು ಹಲವು ವರ್ಷಗಳ ಶಿಷ್ಟಾಚಾರ ಮುರಿದಿದ್ದಾರೆ.

     ಈ ಕುರಿತು ಮಾತನಾಡಿರುವ ಮುಖ್ಯ ಆರ್ಥಿಕ ಸಲಹೆಗಾರ ಕೆ.ಸುಬ್ರಹ್ಮಣ್ಯಂ, ‘ವಸಾಹತು ಮನಃಸ್ಥಿತಿಯಿಂದ ನಾವು ಮುಕ್ತರಾಗಿರುವುದನ್ನು ಈ ಬದಲಾವಣೆಯು ಸಂಕೇತಿಸುತ್ತದೆ’ ಎಂದು ಹೇಳಿದ್ದಾರೆ.

     ಈ ಹಿಂದೆ ಪಿ.ಚಿದಂಬರಂ ಅವರು, ಸರಳ ಕಂದು ಮತ್ತು ಕೆಂಪು ಕಂದು ಬಣ್ಣದ ಬ್ರೀಫ್‌ ಕೇಸ್ ಬಳಸಿದ್ದರು. ಅರುಣ್ ಜೇಟ್ಲಿ ಅವರು 2014ರ ತಮ್ಮ ಪ್ರಥಮ ಬಜೆಟ್​ ಮಂಡನೆಗೆ ಕಂದು ಬಣ್ಣದ ಮತ್ತು 2017ರಲ್ಲಿ ಗಾಢ ಕಂದು ಬಣ್ಣದ ಬ್ರೀಫ್ ಕೇಸ್​ ಬಳಸಿದ್ದರು. 2019 ಲೇಖಾನುದಾನ ಮಂಡಿಸಿದ್ದ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್​ ಕಪ್ಪು ಬಣ್ಣದ ಬಜೆಟ್​ ಪೆಟ್ಟಿಗೆ ತೆಗೆದುಕೊಂಡು ಹೋಗಿದ್ದರು.

     ಆದರೆ, ಇದೇ ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಪ್ರಾಚೀನ ಶೈಲಿಯಲ್ಲಿ ಕೆಂಪು ವಸ್ತ್ರದಲ್ಲಿ ಬಜೆಟ್​ ಪ್ರತಿಗಳನ್ನು ತೆಗೆದುಕೊಂಡು ಹೋಗುವ ಮೂಲಕ ಬ್ರಿಟಿಷ್ ಸಂಪ್ರದಾಯವನ್ನು ಮುರಿದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link