ನಮ್ಮ ತಲೆ ಮೇಲೇ ದೇವೆಗೌಡರು ಬಂದು ಕೂರಲು ಬಿಡುವುದಿಲ್ಲ – ಶಾಸಕ ಜೆ.ಸಿ. ಮಾಧುಸ್ವಾಮಿ

ತುಮಕೂರು :

       ನಮ್ಮ ತುಮಕೂರು ಜಿಲ್ಲೆಯಲ್ಲಿ ನಾವು ರಾಜಕಾರಣ ಮಾಡಿದ್ದೇವೆ, ಮಾಡುತ್ತಿದ್ದೇವೆ. ಬೇರೇಯವರೂ ತುಮಕೂರು ಜಿಲ್ಲೆಗೆ ಬಂದು ರಾಜಕಾರಣ ಮಾಡುವ ದುಸ್ಥಿತಿ ನಮಗೆ ಬಂದಿಲ್ಲ, ನಮ್ಮ ತಲೆ ಮೇಲೆ ದೇವೆಗೌಡರು ಬಂದು ಕೂರಲು ಬಿಡುವುದಿಲ್ಲ, ತುಮಕೂರು ಜಿಲ್ಲೆಯ ಮೇಲೆ ಪ್ರೀತಿ ಇದ್ದರೇ ನೀರಾವರಿಯ ಅನುಕೂಲ ಮಾಡಬೇಕಿತ್ತು, ಅದನ್ನು ಬಿಟ್ಟು ಯಾವುದೇ ಹಿತಚಿಂತನೆಗಳಿಲ್ಲದೇ ಕೇವಲ ಅಧಿಕಾರದ ದಾಹಕ್ಕಾಗಿ, ಹುಡುಗಾಟಕ್ಕಾಗಿ ತುಮಕೂರು ಜಿಲ್ಲೆಗೆ ವಲಸೆ ಬಂದಿರುವವರನ್ನು ವಾಪಸ್ಸು ಕಳಿಸುವ ಕೆಲಸ ಜಿಲ್ಲೆಯ ಮತದಾರರು ಮಾಡಬೇಕಾಗಿದೆ ಎಂದು ತಿಳಿಸಿದರು.

         ಅವರು ಗುಬ್ಬಿ ವಿಧಾನಸಭಾ ಕ್ಷೇತ್ರದ ಹಾಗಲವಾಡಿಯಲ್ಲಿ ರೋಡ್ ಷೋ ಮೂಲಕ ಮತಯಾಚನೆ ಮಾಡುತ್ತಾ ಮಾತನಾಡಿದರು.
ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಜಿ.ಎನ್. ಬೆಟ್ಟಸ್ವಾಮಿರವರು ಮಾತನಾಡಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನಡೆದ ಮೋಸದಿಂದ ಹಿಂದುಳಿದ ವರ್ಗದ ನಾಯಕ ಎ.ಕೃಷ್ಣಪ್ಪರವರನ್ನು ನಮ್ಮ ಸಮುದಾಯ ಕಳೆದುಕೊಳ್ಳಬೇಕಾಯಿತು, ನಾಲ್ಕು ಜನ ಶಾಸಕರಿದ್ದೇವೆ ನಿಮ್ಮ ಗೆಲುವು ಸುಲಭ ಎಂದು ಅವರನ್ನು ನಂಬಿಸಿ ಕರೆತಂದು ಯಾವೊಬ್ಬ ಶಾಸಕನ ಕ್ಷೇತ್ರದಲ್ಲಿ ಅವರಿಗೆ ಲೀಡ್ ಬರದಂತೆ ಕುತಂತ್ರ ಮಾಡಿ ನಂಬಿಕೆ ದ್ರೋಹ ಮಾಡಿದರು.

       ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ನಂಬಿಕೆ ದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಿ ಎಂದು ತಿಳಿಸಿದರು.

        ಕಳೆದ 5 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತುಮಕೂರು ಜಿಲ್ಲೆಯ ಅಭಿವೃದ್ದಿಗಾಗಿ ಹೆಚ್.ಎ.ಎಲ್. ಇಸ್ರೋ ನಂತಹ ಸಂಸ್ಥೆಗಳನ್ನು ಸ್ಥಾಪನೆ ಮಾಡುವುದರ ಜೊತೆಗೆ ತುಮಕೂರು ನಗರವನ್ನು ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಮಾಡಿ ಸಾವಿರ ಕೋಟಿಯ ಅನುದಾನ ನೀಡಿದೆ.

         ಹಿಂದಿನ ಬಾರಿಯೇ ಬಿಜೆಪಿಯನ್ನು ಬೆಂಬಲಿಸಿದ್ದರೇ ತುಮಕೂರು ಜಿಲ್ಲೆಗೆ ಮತ್ತಷ್ಟು ಅಭಿವೃದ್ದಿ ಕೆಲಸಗಳು ಆಗುತ್ತಿತ್ತು ಎಂಬುಂದು ನನ್ನ ಅಭಿಪ್ರಾಯ, ಈ ಬಾರಿಯೂ ಕೇಂದ್ರದಲ್ಲಿ ನರೇಂದ್ರ ಮೋದಿರವರ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಈ ಬಾರಿ ಮತದಾರರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜುರವರು ಮತಯಾಚಿಸಿದರು.

        ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ, ದೇಶಕ್ಕೆ ನರೇಂದ್ರ ಮೋದಿ ರವರ ನಾಯಕತ್ವ ಅತ್ಯಂತ ಅವಶ್ಯಕವಾಗಿದೆ, ಇಂತಹ ಸಂದರ್ಭದಲ್ಲಿ ನಾವು ಮಾಡಿದಂತಹ ತಪ್ಪುಗಳನ್ನು ನಾವು ತಿದ್ದಿಕೊಂಡು, ಮತ್ತೊಮ್ಮೆ ಮೋದಿರವರನ್ನು ಪ್ರಧಾನಿ ಮಾಡಲು ನಿಮ್ಮ ಮುಂದೆ ಬಂದಿದ್ದೇವೆ ಈ ಬಾರಿ ಬಿಜೆಪಿಯನ್ನು ಕೈಹಿಡಿಯಬೇಕೆಂದು ವಿನಂತಿಸಿದರು. ಬಿಜೆಪಿ ಗುಬ್ಬಿ ಮಂಡಲ ಅಧ್ಯಕ್ಷರಾದ ಅ.ನಾ. ಲಿಂಗಪ್ಪ , ಮುಖಂಡರಾದ ಚಂದ್ರಶೇಖರ್ ಬಾಬು, ಎನ್.ಸಿ. ಪ್ರಕಾಶ್, ಸಾಗರನಹಳ್ಳಿ ವಿಜಯ್ ಕುಮಾರ್, ಚಂದ್ರಮೌಳಿ,

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap