ಎಂ ಎನ್ ಕೋಟೆ
ಮಳೆ ನೀರನ್ನು ಭೂಮಿಯಲ್ಲಿ ಇಂಗಿಸುವಂತೆ ಮಾಡಿದರೆ ಕಡಿಮೆ ಮಳೆಯಲ್ಲಿ ಉತ್ತಮ ಬೆಳೆಯನ್ನು ಬೆಳೆಯಬಹುದು ಎಂದು ಜೀವನೋಪಾಯ ಉತ್ತೇಜನಾಧಿಕಾರಿ ಗುರುದತ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ರುದ್ರರಾಧ್ಯ ಜಮೀನಿನಲ್ಲಿ ಹಮ್ಮಿಕೊಂಡಿದ್ದ ಬಾಳೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಕಡಿಮೆ ನೀರಿನಲ್ಲಿ ಸುಸ್ಥಿರ ಮತ್ತು ಸಾವಯುವ ಕೃಷಿ ಮಾಡುವ ಬಗ್ಗೆ ಸಿರಿಧಾನ್ಯಗಳನ್ನು ಹೆಚ್ಚಾಗಿ ರೈತರು ಬೆಳೆಯಬೇಕು. ಸಾವಯವ ಗೊಬ್ಬರಗಳನ್ನು ಕಡ್ಡಾಯವಾಗಿ ಮಾಡಿದರೆ ಉತ್ತಮ ಇಳುವರಿಯನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ರಾಸಯನಿಕಗೊಬ್ಬರಗಳನ್ನು ಹಾಕಿ ಆದಾಯವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಸಾವಯುವ ಗೊಬ್ಬರದಿಂದ ಆರ್ಥಿಕವಾಗಿ ರೈತರು ಮುಂದೆ ಬರಬಹುದು ಎಂದು ತಿಳಿಸಿದರು. ಸಿರಿಧಾನ್ಯಗಳನ್ನು ಬೆಳೆದು ಉಪಯೋಗಿಸಿದರೆ ಮನುಷ್ಯರು ಆರೋಗ್ಯವಾಗಿರುತ್ತಾರೆ. ಆದ್ದರಿಂದ ಎಲ್ಲ ರೈತರು ಸಿರಿಧಾನ್ಯಗಳನ್ನು ಜಾಸ್ತಿ ಬೆಳೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕ್ ಸಂಯೋಜಕ ಅರುಣ್ ಕುಮಾರ್ , ತಾಲ್ಲೂಕ್ ಜೀವನೋಪಾಯ ಉತ್ತೇಜಾನಾಧಿಕಾರಿ ಹರ್ಷಿತ , ಕ್ಷೇತ್ರಾಧಿಕಾರಿಗಳಾದ ಎಂ.ವಿ ರಂಗನಾಥ್ , ಸಂಜೀವರೆಡ್ಡಿ , ಮಂಜುನಾಥ್ , ಸುಭದ್ರಮ್ಮ , ಶರತ್ , ಕಂಪನಿಯ ನಿರ್ದೇಶಕರಾದ ಲೋಕನಾಥ್ , ಸವಿತ , ಪುಟ್ಟಸ್ವಾಮಿ , ಜಯರಾಮ್ , ಮುಖಂಡರಾದ ಪಾಂಡುರಂಗಯ್ಯ , ಕರಿಯಣ್ಣ , ರುದ್ರಣ್ಣ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
