ಅಹ್ಮದಾಬಾದ್: 

ದೇಶ ಕಂಡ ಅಪ್ರತಿಮ ಪ್ರಧಾನಿ ಪಟೇಲರ ಬೃಹತ್ ವಿಗ್ರಹ ನಾಳೆ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗುವ ಸಮಯದಲ್ಲಿ ದೊಡ್ಡ ವಿಘ್ನವೊಂದು ಎದುರಾಗಿದೆ ಅದೇ ಈ ಬೃಹತ್ ವಿಗ್ರಹ ನಿಂತಿರುವುದು ಸಾವಿರಾರು ಆರಣ್ಯ ವಾಸಿಗಳ ಸಾವಿನ ಮೇಲೆ ಎಂಬ ಕೂಗು ಕೇಳ ತೊಡಗಿದೆ ಇದರಿಂದಾಗಿ ನಾಳಿನ ಉದ್ಗಾಟನೆಯ ಮೇಲೆ ಪ್ರತಿಭಟನೆಯ ಕರಿ ನೆರಳು ಬಿದ್ದಿರುವುದಂತು ನಿಜ. ವಾಸ್ತವದಲ್ಲಿ ಪ್ರಧಾನಿ ಮೋದಿಯವರ ಕನಸಿನ ಯೋಜನೆ ಸ್ಟ್ಯಾಚ್ಯೂ ಆಫ್ ಯೂನಿಟಿ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿರುವಾಗ ಈ ಕುರಿತು ಸ್ಥಳೀಯ ಗ್ರಾಮಸ್ಥರು ಪ್ರಧಾನಿ ಮೋದಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಈ ಹಿಂದೆ ಇದೇ ಯೋಜನೆಯನ್ನು ವಿರೋಧಿಸಿ ಸ್ಥಳೀಯ ಬುಡುಕಟ್ಟು ಜನಾಂಗ ಮತ್ತು ಸುಮಾರು 75 ಸಾವಿರ ಅರಣ್ಯ ನಿವಾಸಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಎಚ್ಚರಿಕೆ ನೀಡಿದ್ದರು ಮತ್ತು ಸರ್ದಾರ್ ವಲ್ಲಭ ಭಾಯ್ ಪಟೇಲರು ಬದುಕಿದ್ದರೆ ಅವರು ಕೂಡ ಇಲ್ಲಿ ಅಗಿರುವ ವಿಧ್ವಂಸವನ್ನು ನೋಡಿದರೆ ಖಂಡಿತಾ ಕಣ್ಣೀರು ಹಾಕುತ್ತಾರೆ . ಇದೀಗ ಇದೇ ವಿಚಾರವಾಗಿ ಗ್ರಾಮಸ್ಥರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಅಮಾಯಕರ ಶವದ ಮೇಲೆ ವಿಶ್ವದ ಬೃಹತ್ ವಿಗ್ರಹ ಸ್ಥಾಪನೆಯಾಗಿದೆ, ಇಲ್ಲಿನ ವಿಧ್ವಂಸ ನೋಡಿದರೆ ಸರ್ದಾರ್ ಪಟೇಲರೂ ಕೂಡ ಕಣ್ಣೀರು ಹಾಕುತ್ತಾರೆ ಎಂದು ತಮ್ಮ ನೋವು ತೋಡಿಕೊಂಡಿದ್ಜಾರೆ.
ಸರ್ದಾರ್ ವಲ್ಲಭ ಭಾಯ್ ಪಟೇಲರ ವಿಗ್ರಹ ಸ್ಥಾಪನೆಯಾಗಿರುವ ಸರ್ದಾರ್ ಸರೋವರ ಡ್ಯಾಂ ನ ಸುತ್ತಮುತ್ತಲಿನ ಸುಮಾರು 22 ಗ್ರಾಮಗಳ ಮುಖ್ಯಸ್ಥರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ವಿಗ್ರಹ ನಿರ್ಮಾಣ ಯೋಜನೆಯಿಂದಾಗಿ ತಮಗಾಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ನಾಳಿನ ಉದ್ಘಾಟನಾ ಸಮಾರಂಭಕ್ಕೆ ನಾವು ಯಾರೂ ಬರುವಿದಲ್ಲ. ನಿಮಗೆ ಸ್ವಾಗತವನ್ನೂ ಕೂಡ ಕೋರುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.








