ಬೆಂಗಳೂರು
ಪೀಣ್ಯ ಕೈಗಾರಿಕಾ ಪ್ರದೇಶದ ಎರಡು ಇಸ್ಪೀಟ್ ಕ್ಲಬ್‍ಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 53 ಮಂದಿಯನ್ನು ಬಂಧಿಸಿ ವಿಚಾರಣೆ ನಡಿಸಿದ್ದಾರೆ.
ಪೀಣ್ಯದ ಕೈಗಾರಿಕಾ ಪ್ರದೇಶದ ಮೊದಲ ಮುಖ್ಯರಸ್ತೆಯ ರಂಗನಾಥಸ್ವಾಮಿ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ಮೇಲೆ ಮೊದಲು ದಾಳಿ ನಡೆಸಿ ಕ್ಲಬ್‍ನ ಮಾಲೀಕರಾದ ಕೃಷ್ಣಪ್ಪ, ರಾಜು, ಕ್ಯಾಷಿಯರ್‍ಗಳಾದ ಸುರೇಶ್, ದೇವರಾಜು ಸೇರಿ 25 ಮಂದಿಯನ್ನು ಬಂಧಿಸಿದ್ದಾರೆ.
ನಂತರ ಇದೇ ಪ್ರದೇಶದ ಲಕ್ಷ್ಮಿ ರಿಕ್ರಿಯೇಷನ್ ಅಸೋಸಿಯೇಷನ್ ಮೇಲೆ ಕ್ಲಬ್ ಮೇಲೆ ದಾಳಿ ನಡೆಸಿ ಕ್ಲಬ್‍ನ ಮಾಲೀಕರಾದ ಚಂದ್ರಶೇಖರ್, ಸಂತೋಷ, ಕ್ಯಾಷಿಯರ್ ರಮೇಶ ಸೇರಿ 28 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಎರಡು ಕ್ಲಬ್‍ಗಳಲ್ಲಿ ಬಂಧಿತ ಆರೋಪಿಗಳಿಂದ 99,740 ರೂ.ನಗದು, ಇಸ್ಪೀಟ್ ಪ್ಯಾಕ್‍ಗಳು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಪೀಣ್ಯ ಪೆಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದಾಳಿ ನಡೆಸಿದ ಎರಡು ಕ್ಲಬ್‍ಗಳಲ್ಲಿ ಹಲವು ದಿನಗಳಿಂದ ಇಸ್ಪೀಟ್ ಜೂಜಾಟದ ದಂಧೆ ನಡೆಸುತ್ತಿರುವುದು ತನಿಖೆಯಲ್ಲಿ ಪೆಲೀಸರಿಗೆ ಕಂಡು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








