ದಾವಣಗೆರೆ:
ಇಲ್ಲಿನ ಬಸವನಗರ ಠಾಣೆಯ ವ್ಯಾಪ್ತಿಯ ವಸಂತ ರಸ್ತೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ಸುಮಾರು 55ರಿಂದ 60 ವರ್ಷದ ವ್ಯಕ್ತಿಯನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಈ ಅನಾಮಧೇಯ ವ್ಯಕ್ತಿಯು ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯ ಹೆಸರು, ವಿಳಾಸ ಹಾಗೂ ಸಂಬಂಧಿಕರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಶವವು ಜಿಲ್ಲಾಸ್ಪತ್ರೆಯ ಶವಗಾರದಲ್ಲಿದ್ದು, ವಾರಸುದಾರರು ಇದ್ದಲ್ಲಿ ಶವಗಾರ ಇಲ್ಲವೇ, ಬಸವನಗರ ಠಾಣೆ ದೂರವಾಣಿ ಸಂಖ್ಯೆ (08192-272009)ಗೆ ಸಂಪರ್ಕಿಸಲು ಪ್ರಕಟಣೆ ಕೋರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
