ಮಹಿಳೆಯ ಅನುಮಾಸ್ಪದ ಆತ್ಮಹತ್ಯೆ

0
1

ಬೆಂಗಳೂರು

    ಮಹಿಳೆಯೊಬ್ಬರು ನೇಣು ಬಿಗಿದು ಅನುಮಾನಾಸ್ಪದವಾಗಿ ಮೃತಪಟ್ಟ ದುರ್ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     ರಾಜರಾಜೇಶ್ವರಿನಗರದ ಮಂಜುಳಾ (27)ಎಂದು ಶಂಕಾಸ್ಪದವಾಗಿ ಮೃತಪಟ್ಟವರನ್ನು ಗುರುತಿಸಲಾಗಿದೆ. ಗಿರೀಶ್ ಎಂಬಾತನ ಜೊತೆ ಮೂರು ವರ್ಷದ ಹಿಂದೆ ಮಂಜುಳಾ ವಿವಾಹವಾಗಿತ್ತು. ಮದುವೆಯ ನಂತರ ವರದಕ್ಷಿಣೆಗಾಗಿ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಹೀಗಾಗಿ ಆಕೆ ಸಾವನ್ನಪ್ಪಿದ್ದಾಳೆಂದು ಮಂಜುಳಾ ಪೋಷಕರು ಆರೋಪಿಸಿದ್ದಾರೆ .ಆತ್ಮಹತ್ಯೆಗೆ ಶರಣಾದ ಮಹಿಳೆಮಂಜುಳಾ ಕೂಡ ಡೆತ್‍ನೋಟ್‍ನಲ್ಲಿ ಗಂಡನ ಮನೆಯವರ ಕಿರುಕುಳದ ಕುರಿತು ವಿವರಿಸಿದ್ದಾಳೆ.

     ಮದುವೆ ಆಗಿ ಜಿಗುಪ್ಸೆಯಾಗಿದ್ದು, ನನಗೆ ಜೀವನ ಮಾಡಲು ಕಷ್ಟ ಅನಿಸುತ್ತಿದೆ. ನನ್ನ ಗಂಡ ಗಿರೀಶ್ ಹಾಗೂ ಆಕೆಯ ಅಕ್ಕ ಶಾರದ ತುಂಬಾ ಕಿರುಕುಳ ನೀಡುತ್ತಿದ್ದಾರೆ. ನನ್ನ ಸಾವಿಗೆ ಅವರೇ ಕಾರಣ. ಅವರಿಬ್ಬರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ನನ್ನ ಗಂಡು ಮಗು ನನ್ನ ಅಮ್ಮನಿಗೆ ಕೊಟ್ಟು ಬಿಡಿ. ಅಪ್ಪ, ಅಮ್ಮ, ಅಣ್ಣ.. ನೀವು ಖುಷಿಯಿಂದಿರಿ, ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ. ಕ್ಷಮಿಸು ಮಗನೇ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

      ಗಿರೀಶ್‍ನನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here