ಚಿತ್ರದುರ್ಗ
ನಾವು ನೈತಿಕ ಅದಃಪತನ ಕಾಣುತ್ತಿದ್ದೇವೆ. ಎಲ್ಲಾ ಕಡೆ ಸ್ವಾರ್ಥಇದೆ. ರಾಜಕೀಯ ಬದ್ಧತೆ ಮತ್ತು ಸ್ಥಿರತೆ ಬರಬೇಕಾದರೆ ನಾವು ಸರಿಯಾಗಬೇಕು. ಸಾಂವಿಧಾನಿಕ ಬದ್ಧತೆಗಳು ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು
ಮುರುಘಾಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕøತಿ ಉತ್ಸವದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಮುರುಘಾಶರಣರು ಪರಿವರ್ತಿತ ಮಠಾದೀಶರು. ವೈಚಾರಿಕ ಆಲೋಚನೆಗಳು ಅವರದ್ದು. ನಾವುಗಳು ಬಸವಣ್ಣನವರ ತತ್ತ್ವಗಳನ್ನು ಪ್ರಚಾರ ಮಾಡಬೇಕು, ನಾವು ಕೆಡಿಕಿನಿಂದ ಒಳಿತಿನ ಕಡೆಗೆ ಸಾಗಬೇಕೆಂದು ಹೇಳಿದರು.
ಸಮಾಜದಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಶ್ರೀಮಠ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಶ್ರೀಮಠಕ್ಕೂ ನನಗೂ ಅವಿನಾಭಾವ ಸಂಬಂಧವಿದೆ ಎಂದರು 12ನೇ ಶತಮಾನದಲ್ಲಿ ಸಮಾನತೆಗಾಗಿ ಕ್ರಾಂತಿ ನಡೆಯಿತು. ಮೇಲು ಕೀಳು ಒಳ್ಳೆಯದಲ್ಲ ಎಂದು ಬಸವಾದಿ ಶರಣರು ನಂಬಿದ್ದರು. ಶರಣರ ಆಚಾರ-ವಿಚಾರ ನಡೆ-ನುಡಿ ನಮಗೆ ಬದುಕಾಗಬೇಕು ಎಂದು ಹೇಳಿದರು
ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸಮತೋಲನವನ್ನು ಕಾಯ್ದುಕೊಳ್ಳುವವರೇ ಸಮಸ್ಯೆಗಳನ್ನು ನಿವಾರಿಸುವಂತವರಾಗುತ್ತಾರೆ. ರಾಜಕಾರಣಕ್ಕಾಗಿ ರಾಜಕಾರಣವನ್ನು ಯಾರೂ ಮಾಡಬಾರದು ಹಾಗೆಯೇ ಸೇಡಿನ ರಾಜಕಾರಣ ಸ್ವಾರ್ಥ ರಾಜಕಾರಣವನ್ನು ಮಾಡಬಾರದು ರಾಜಕಾರಣದ ಅತಂತ್ಯ ಪ್ರಮುಖವೆಂದರೆ ಆಶವೆಂದರೆ ಲೋಕ ಕಲ್ಯಾಣ ಹಾಗೂ ಜನ ಕಲ್ಯಾಣದ ರಾಜಕಾರಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು
21 ನೇ ಶತಮಾನದ ಈ ಸಂದರ್ಭದಲ್ಲಿ ಉತ್ತಮ ಜನಸೇವೆಗೆ ರಾಜಕಾರಣ ಬದ್ದವಾಗಿರಬೇಕು, ಆದರೆ ಈ ಹೊತ್ತು ರೆರ್ಸಾಟ್ ರಾಜಕಾರಣ ಜನಪ್ರಿಯವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಸ್ಥಿರರತೆ ಮತ್ತು ಅತಂತ್ರ ಸ್ಥಿತಿಯಾಗಿದೆ. ಅಸ್ಥಿರರತೆ ಮುಖ್ಯಕಾರಣ ಸಂದಿಗ್ದತೆಗಳು ರಾಜಕೀಯ ವ್ಯಕ್ತಿಗಳನ್ನೇ ಆರೋಪ ಮಾಡದೆ ಮತದಾರನು ಕೂಡ ಜಾತಿ ಹಣದ ಆಮಿಷಕ್ಕೆ ಒಳಗಾಗದೆ ರಾಜಕೀಯ ಅಸ್ಥಿರತೆ ಉಂಟಾಂಗಂತೆ ನೋಡಿಕೊಳ್ಳಬೇಕು, ಹಾಗಾಗೆ ಮತದಾರ ಮೊದಲು ಜಾಗೃತನಾಗಬೇಕು ಎಂದು ತಿಳಿಸಿದರು.
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಮೊದಲ ಬಾರಿಗೆ ಬುದ್ದ ತನ್ನ ಆಸ್ಥಾನದಲ್ಲಿ ಸಮಾನತೆಗಾಗಿ ಒಂದು ಪ್ರಯತ್ನ ಮಾಡಿದರು. ಆದರೆ ಸಾವಿಧಾನಿಕ ವ್ಯವಸ್ಥೆಯಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದರು. ಪ್ರಜೆಯೇ ಪ್ರಭುವಾಗಬೇಕ ಎಂದರು ಸಾರ್ವತ್ರಿಕವಾಗಿ ಮುಕ್ತ ಚುಣಾವಣೆಗಳು ನಡೆಯಬೇಕು. ಎಲ್ಲರಿಗೂ ಮುಕ್ತವಾದ ಮತದಾನವಿರಬೇಕು. ಅದು ಪ್ರಜಾಪ್ರಭುತ್ವ ವ್ಯವಸ್ಥಯಿಂದ ಮಾತ್ರ ಸಾದ್ಯ.
ನಮ್ಮದು ಒಂದು ದೇಶ, ಒಂದು ಓಟು ಎನ್ನುವ ಕಲ್ಪನೆ ಜನವರಿ 26 1950ರಲ್ಲಿ ಜಾರಿ ಬಂದಿತು. ನಮ್ಮ ಪ್ರಜಾಪ್ರಭತ್ವ ವ್ಯವಸ್ಥೆ ನಮಗೆ ಎಲ್ಲಾ ರೀತಿಯಲ್ಲೂ ಅನುಕೂಲಗಳನ್ನು ಮಾಡಿ ಕೊಟ್ಟಿವೆ. ಜನಸಾಮಾನ್ಯರು ಈ ಪ್ರಜಾಪ್ರಭತ್ವ ವ್ಯವಸ್ಥೆಯನ್ನು ಉಳಿಸಿದ್ದಾರೆ ಎಂದರು
ನಮ್ಮ ದೇಶದಲ್ಲಿರುವ ಮುಖ್ಯ ಸವಾಲುಗಳೆಂದರೆ ಅಸ್ಥಿರತೆ ಮತ್ತು ಆಗಾಗ ನಡೆಯುವ ಚುನಾವಣೆಗಳು 1967 ರಲ್ಲಿ ನಮ್ಮ ದೇಶದಲ್ಲಿ ಅಸ್ತಿರತೆ ಪ್ರಾರಂಭವಾಯಿತು. ಅನೇಕ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿದ್ದು, ಅಸ್ತಿರತೆಗೆ ಕಾರಣವಾಯಿತು. ಕುಟುಂಬರಾಜಕಾರಣ ಉತ್ತರಾದಾಯಿತ್ವ, ರಾಜಕಾರಣ ವ್ಯಾಪರಿಕರಣ, ಪಾತಕಿಕರಣ ವಿಷಯಗಳ ಸಂಘರ್ಷ ಮೊದಲಾವು ಅಸ್ತಿರತೆ ಕಾರಣವಾಗಿವೆ. ಇಂದು ಮಾಧ್ಯಮಾಗಳು ಕೂಡ ವ್ಯಾಪರಿಕರಣವಾಗುತ್ತಿವೆ ಎಂದು ವಿಷಾಧಿಸಿದರು
5 ವರ್ಷಕ್ಕೆ ಒಂದು ಚುನಾವಣೆ ನಡೆಯಬೇಕು, ಏಕಕಾಲದಲ್ಲಿ ಸಂಸತ್ ಮತ್ತು ವಿಧಾನಸಭೆಗೆ ಚುನಾವಣೆಗಳು ನಡೆಯಬೇಕು. ಉಪ-ಚುನಾವಣೆಗಳು ಇರಬಾರದು. ರಾಜಕಾರಣವನ್ನು ವೃತ್ತಿಯೆಂದು ಹೇಳುವವರು ಭ್ರಷ್ಟರು. ತಪ್ಪಿಲ್ಲದಿರುವ ಮತದಾರರ ಪಟ್ಟಿ ಬರಬೇಕು. ಆದರ್ಶವಾದ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ವಿಪ್ ಇರಬಾರದೆಂದು ಅಭಿಪ್ರಾಯಪಟ್ಟರು.
ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಜಲಸಂಪನ್ಮೂಲ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಇಂದು ರಾಜಕಾರಣದಲ್ಲಿ ಪ್ರಬುದ್ದವಾದ ಸಭೆಗಳು ನಡೆಯುತ್ತಿಲ್ಲ, ರಾಜಕಾರಣದಲ್ಲಿ ಅನೇಕ ದುರುಪಯೋಗ ನಡೆಯುತ್ತಿದೆ. ದೆಹಲಿ ಚುನಾವಣೆ ನಮಗೆ ಆದರ್ಶವಾಗಬೇಕು. ರಾಜಕಾರಣಿಗಳು ಹೇಳಿದ ಹಾಗೆ ಅಧಿಕಾರ ನಡೆಯಬಾರದು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಭೊವಿ ಸಮಾಜದ ಅಧ್ಯಕ್ಷರಾದ ಹೆಚ್.ಆನಂದಪ್ಪ, ರಾಜ್ಯ ಭೋವಿ ಸಮಾಜದ ಅಧ್ಯಕ್ಷರಾದ ರವಿ ಮಕಳೆ, ವಿಜಯಪುರ ಬಿಎಲ್‍ಡಿಇ ಸಂಸ್ಥೆಯ ಡಾ. ಮಹಾಂತೇಶ ಬಿರದಾರ ಶರಣ ಸಂಸ್ಕøತಿ ಉತ್ಸವ ಸಮಿತಿ ಕಾರ್ಯಧ್ಯಕರಾದ ಹನುಮಲಿ ಷಣ್ಮುಖಪ್ಪ ಉಪಸ್ಥಿತರಿದ್ದರು.
